Thursday, January 29, 2026
26.8 C
Bengaluru
Google search engine
LIVE
ಮನೆ#Exclusive Newsಲೆಬನಾನ್ ಬಿಟ್ಟು ಬಾರತಕ್ಕೆ ಮರಳಿ:ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ಲೆಬನಾನ್ ಬಿಟ್ಟು ಬಾರತಕ್ಕೆ ಮರಳಿ:ಭಾರತೀಯರಿಗೆ ವಿದೇಶಾಂಗ ಇಲಾಖೆ ಸೂಚನೆ

ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ವಿದೇಶಾಂಗ ಇಲಾಖೆ ಕೂಡಲೇ ಲೆಬೆನಾನ್ ತೊರೆಯುವಂತೆ ಅಲ್ಲಿನ ಭಾರತೀಯರಿಗೆ ಎಚ್ಚರಿಕೆ ನೀಡಿದೆ.ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಸುರಕ್ಷತಾ ಸಲಹೆಯನ್ನು ಬಿಡುಗಡೆ ಮಾಡಿದ್ದು, ಕೂಡಲೇ ಲೆಬೆನಾನ್ ತೊರೆಯುವಂತೆ ಸಲಹೆ ನೀಡಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬೈರುತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ, “1 ಆಗಸ್ಟ್ 2024 ರಂದು ನೀಡಲಾದ ಸಲಹೆಯ ಪುನರಾವರ್ತನೆಯಂತೆ ಮತ್ತು ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಉಲ್ಬಣಗಳ ದೃಷ್ಟಿಯಿಂದ, ಮುಂದಿನ ಸೂಚನೆ ಬರುವವರೆಗೆ ಲೆಬನಾನ್‌ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಬಲವಾಗಿ ಸಲಹೆ ನೀಡಲಾಗಿದೆ ಎಂದು ಹೇಳಿದೆ.

ಅಂತೆಯೇ “ಈಗಾಗಲೇ ಲೆಬನಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಲೆಬನಾನ್ ತೊರೆಯಲು ಬಲವಾಗಿ ಸಲಹೆ ನೀಡಲಾಗಿದೆ” ಎಂದು ಅದು ಸೇರಿಸಿದೆ.

ಏತನ್ಮಧ್ಯೆ, ಇಸ್ರೇಲ್ ತನ್ನ ಸೈನಿಕರಿಗೆ ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬೊಲ್ಲಾ ವಿರುದ್ಧ ಸಂಭವನೀಯ ನೆಲದ ಕಾರ್ಯಾಚರಣೆಗೆ ಸಿದ್ಧವಾಗುವಂತೆ ಹೇಳಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಧ್ಯಪ್ರಾಚ್ಯದಲ್ಲಿ “ಸಂಪೂರ್ಣ ಯುದ್ಧ” ದ ವಿರುದ್ಧ ಎಚ್ಚರಿಸಿದ ಬೆನ್ನಲ್ಲೇ ಇಸ್ರೇಲ್ ಈ ಹೇಳಿಕೆ ನೀಡಿದೆ.

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments