ಬೆಳಗಾವಿ: ನಗರದ ತಹಶೀಲ್ದಾರ್ ಕಚೇರಿ ಕೊಠಡಿಯಲ್ಲೇ ದ್ವಿತೀಯ ದರ್ಜೆ ಗುಮಾಸ್ತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂಲತಃ ರಾಯ ಬಾಗದ, ಸದ್ಯ ತಹಶೀಲ್ದಾರ್ ಎಸ್‌ಡಿಎ ಆಗಿದ್ದ ರುದ್ರಣ್ಣ ಯಡವಣ್ಣವರ(35). ರುದ್ರಣ್ಣ ತಹಶೀಲ್ದಾರ್ ಕೊಠಡಿಯ ಕೋರ್ಟ್ ಕಲಾಪ ನಡೆ ಯುವ ಕೊಠಡಿ ಫ್ಯಾನ್‌ಗೆ ನೇಣು ಹಾಕಿ ಕೊಂಡಿದ್ದು, ಮಂಗಳವಾರ ಬೆಳಗ್ಗೆ ಕಚೇರಿಗೆ ಸಿಬ್ಬಂದಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಹಶೀಲ್ದಾರ್ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳರ್ ಆಪ್ತ ಸಹಾಯಕ ಸೋಮು ದೊಡವಾಡಿ, ಕಚೇರಿ ಸಿಬ್ಬಂದಿ ಆಶೋಕ ಕಬ್ಬಲಿಗಾರ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರು ತಲೆ ಮರೆಸಿಕೊಂಡಿದ್ದಾರೆ. ಆತ್ಮಹತ್ಯೆ ಮುನ್ನಾ ದಿನ ರುದ್ರಣ್ಣ ಅವರನ್ನು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋ ದ್ಯಮ ಮಂಡಳಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ರುದ್ರಣ್ಣ ಅವರಿಂದ ‘ನನ್ನ ಸಾವಿಗೆ ತಹಶೀಲ್ದಾರ್ ಮತ್ತು ಸಚಿವೆಯ ಸಹಾಯಕ ಕಾರಣ’ ಎಂದು ಸಂದೇಶ ರವಾನೆ ಮಾಡಿದ್ದಾನೆ….
ಮರಣ ಸಂದೇಶ
- ನನ್ನ ಸಾವಿಗೆ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಆಪ್ತ ಸಹಾಯಕ ಸೋಮು ದೊಡವಾಡಿ ಕಾರಣ
- ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ಆಗುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ.
- ಆತ್ಮಹತ್ಯೆಗೂ ಮುನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ಮಾತನಾಡಿದ್ದ ರುದ್ರಣ್ಣ