Thursday, May 1, 2025
34.1 C
Bengaluru
LIVE
ಮನೆ#Exclusive NewsTop Newsಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕನ ಹತ್ಯೆ - ಪೊಲೀಸ್​ ಇನ್ಸ್​​​ಪೆಕ್ಟರ್​ ಅಮಾನತು

ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕನ ಹತ್ಯೆ – ಪೊಲೀಸ್​ ಇನ್ಸ್​​​ಪೆಕ್ಟರ್​ ಅಮಾನತು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಲ್ಲಿ ನಡೆದಿದ್ದ ಹತ್ಯೆ ಸಂಬಂಧ ಪೊಲೀಸ್​ ಇನ್ಸ್​​​​​​ಪೆಕ್ಟರ್​​ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್​​​​​ಪೆಕ್ಟರ್​ ಶಿವಕುಮಾರ್​ ಕೆ ಆರ್​, ಹೆಡ್​ ಕಾನ್ಸ್​​​ಸ್ಟೇಬಲ್​ ಚಂದ್ರ ಪಿ ಮತ್ತು ಕಾನ್ಸ್​​ಸ್ಟೇಬಲ್​ ಯಲ್ಲಾಲಿಂಗ ಅಮಾನತುಗೊಂಡವರು. ಈ ಮೂವರನ್ನು ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಳಿಸಲಾಗಿದೆ.

ಕುಡುಪಿನಲ್ಲಿ ಕ್ರಿಕೆಟ್​ ಆಟದ ವೇಳೆ ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಕೂಗಿದ ಆರೋಪದಡಿ ಕೇರಳ ರಾಜ್ಯದ ವಯನಾಡಿನ ಆಶ್ರಫ್​ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದ ಬಗ್ಗೆ ದೀಪಕ್​ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿತ್ತು.

ಆದರೆ  ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಆರಂಭದಲ್ಲಿ ಯುವಕನ ಸಾವನ್ನು ಅಸಹಜ ಸಾವು ಎಂದು ಪರಿಗಣಿಸಿ ಎಫ್​​ಐಆರ್​ ದಾಖಲಾಗಿಸಲಾಗಿತ್ತು. ಆ ಬಳಿಕ ಗುಂಪು ಹಲ್ಲೆಯಿಂದ ಆದ ಕೊಲೆ ಎಂದು ಪ್ರಕರಣವನ್ನು ಮಾರ್ಪಾಡು ಮಾಡಲಾಗಿತ್ತು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments