ರಾಜ್ಯಸುದ್ದಿ

ಕಿರುಕುಳ, ಲಂಚಕ್ಕೆ ಬೇಡಿಕೆ ಆರೋಪ KSRTC ನಿಲ್ದಾಣಾಧಿಕಾರಿ ಸಸ್ಪೆಂಡ್..!

ತುಮಕೂರು: ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣಾಧಿಕಾರಿ ಶಿವಕುಮಾರ್ .ಕೆ ಅವರನ್ನು ಅಮಾನತುಗೊಳಿಸಿ ನಿಗಮದ ವಿಭಾಗಿಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ಆದೇಶಿಸಿದ್ದಾರೆ.

ತುಮಕೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲ್ದಾಣಾಧಿಕಾರಿಯಾಗಿದ್ದ ಶಿವಕುಮಾರ್ ಕೆ. ವಿರುದ್ಧ ಹಲವು ಆರೋಪಗಳಿದ್ದವು. ಕೆಳ ಹಂತದ ಸಿಬ್ಬಂದಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಸೇರಿದಂತೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಹಲವು ದೂರು, ಆರೋಪಗಳು ಕೇಳಿ ಬಂದಿದ್ದವು. ಆದರೆ ಈವರೆಗೆ ಯಾವುದೇ ದೂರುಗಳು ದಾಖಲಾಗಿರಲಿಲ್ಲ.


ಆದರೆ ಈ ಬಾರಿ ವಿಡಿಯೋ ರೆಕಾರ್ಡ್ ದಾಖಲೆ ಸಮೇತವಾಗಿ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶವಾಗಿದೆ ಎಂದು ತಿಳಿದು ಬಂದಿದೆ. ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ದೂರು ಆಧರಿಸಿ ತುಮಕೂರು ನಿಲ್ದಾಣಾಧಿಕಾರಿ ಶಿವಕುಮಾರ್ ಕೆ. ಅವರನ್ನು ಅಮಾನತು ಮಾಡಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button