ಚಾಮರಾಜನಗರ: ಗಂಡಸರಿಗೂ ಉಚಿತ ಬಸ್ ಪ್ರಯಾಣ ಯೋಜನೆ ಘೋಷಿಸಿದರೆ ಕೆಎಸ್ಆರ್’ಟಿಸಿ ಮುಚ್ಚಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಹೇಳಿದರು.

ಯಳಂದೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಗ್ಯಾರಂಟಿ ಯೋಜನೆ ಕುರಿತು ಮಾತನಾಡಿದರು. ಈ ವೇಳೆ ಸ್ಥಳೀಯ ಪುರುಷರು ನಮಗೂ ಫ್ರೀ ಬಸ್ ಕೊಡಿ ಎಂದು ಅಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಗಂಡಸರಿಗೂ ಫ್ರೀ ಬಸ್ ಕೊಟ್ಟರೆ ಕೆಎಸ್ಆರ್’ಟಿಸಿ ಮುಚ್ಚಬೇಕಾಗುತ್ತದೆ ಎಂದು ಹೇಳಿದರು.

ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಸಿಎಂ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಎಲ್ಲ ಜಿಲ್ಲೆಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.ಆರೋಗ್ಯ ಸೇವೆ ನೀಡುವುದು ಸರ್ಕಾರದ ಬದ್ಧತೆಯಾಗಿದ್ದು, ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕೆಂದು ಸಲಹೆ ನೀಡಿದರು.ಆರೋಗ್ಯಕರ ಜೀವನಕ್ಕೆ ಪೌಷ್ಠಿಕಾಂಶದ ಆಹಾರವೂ ಮುಖ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಆಹಾರ ಸೇವನೆಯಲ್ಲಿ ಇಳಿಕೆ ಕಂಡುಬಂದಿದೆ. ಜನರ ಮದ್ಯಪಾನ ತ್ಯಜಿಸಬೇಕು ಎಂದು ಮನವಿ ಮಾಡಿದರು.

ಬಡವರಿಗೆ ಶಕ್ತಿ ಕೊಡುತ್ತಿದ್ದಾರೆ ಎಂದು ನನ್ನ ಮೇಲೆ ಸುಳ್ಳು ಕೇಸ್ ಹಾಕಲಾಗುತ್ತಿದೆ. ಎಲ್ಲಿಯವರೆಗೆ ಜನರ ಆಶೀರ್ವಾದ ಇರುತ್ತೆ ಅಲ್ಲಿಯವರೆಗೆ ಯಾರು ನನ್ನನ್ನ ಜಗ್ಗಿಸಲು-ಬಗ್ಗಿಸಲು ಆಗಲ್ಲ. ಕರ್ನಾಟಕ ಜನರ ಆಶೀರ್ವಾದದಿಂದ ನಾವು ಗಟ್ಟಿಯಾಗಿದ್ದೇವೆ. ಜನರ ಆಶೀರ್ವಾದ ದಿಂದ ಮೂರು ಉಪಚುನಾವಣೆ ಗೆದಿದ್ದೇವೆ‌. ಎಲ್ಲಾ ಧರ್ಮದ ಬಡವರು ನನ್ನ ಜೊತೆ ಇದ್ದಾರೆ, ನಮ್ಮ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿದೆ. ಈಗ ನಾವು 139 ಜನ ಇದ್ದೇವೆ‌. ಜನವರಿ ಫೆಬ್ರವರಿಯಲ್ಲಿ ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯಲಿದೆ ಎಲ್ಲರೂ ನಮ್ಮ ಪಕ್ಷದವರಿಗೆ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

 

Leave a Reply

Your email address will not be published. Required fields are marked *

Verified by MonsterInsights