Wednesday, April 30, 2025
30.3 C
Bengaluru
LIVE
ಮನೆಧರ್ಮಸಮುದ್ರದಲ್ಲಿ ಮುಳುಗಿದೆ ಕೃಷ್ಣನ ದ್ವಾರಕೆ ವೀಕ್ಷಣೆಗೆ ಸಿದ್ಧವಾಗ್ತಿದೆ ಸಬ್ ಮೆರಿನ್ ನೌಕೆ..!

ಸಮುದ್ರದಲ್ಲಿ ಮುಳುಗಿದೆ ಕೃಷ್ಣನ ದ್ವಾರಕೆ ವೀಕ್ಷಣೆಗೆ ಸಿದ್ಧವಾಗ್ತಿದೆ ಸಬ್ ಮೆರಿನ್ ನೌಕೆ..!

ದ್ವಾರಕೆ..ಶ್ರೀ ಕೃಷ್ಣನ ನಗರ..ಮಹಾಭಾರತ ಮುಗಿದ ಮೇಲೆ ಕಂಸನನ್ನ ಕೊಂದಿದ್ದ ಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳೋಕೆ ಜರಾಸಂಧ ಹವಣಿಸುತ್ತಿದ್ದ. ಅದ್ರಂತೆ ತನ್ನ ಜನರಿಗೆ ಕೇಡಾಗಬಾರದು ಅಂತೇಳಿ ಶ್ರೀ ಕೃಷ್ಣ ಮಥುರಾ ಬಿಟ್ಟು ಸೌರಾಷ್ಟ್ರದ ಗೋಮತಿ ನದಿ ತೀರದಲ್ಲೊಂದು ನಗರ ನಿರ್ಮಾಣದ ತೀರ್ಮಾನ ಮಾಡ್ತಾನೆ. ಗೋಮತಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ನಗರ ನಿರ್ಮಾಣಕ್ಕೆ ಮುಂದಾಗ್ತಾರೆ. ಈ ಸ್ಥಳದಲ್ಲೊಂದು ನಗರ ನಿರ್ಮಾಣ ಮಾಡಿಕೊಡುವಂತೆ ದೇವ ಶಿಲ್ಪಿ ವಿಶ್ವಕರ್ಮನಿಗೆ ಮೊರೆ ಇಡ್ತಾನೆ. ಇದಕ್ಕೆ ಸಮುದ್ರ ದೇವ ಒಪ್ಪಿ ಭೂಮಿ ಕೊಟ್ರೆ, ನಾನು ನಗರ ನಿರ್ಮಿಸ್ತೀನಿ ಅಂತ ವಿಶ್ವಕರ್ಮ ಹೇಳಿದಾಗ ಶ್ರೀ ಕೃಷ್ಣ ಪ್ರಾರ್ಥಿಸಿ 12 ಯೋಜನಾ ಭೂಮಿಯನ್ನ ಪಡಿತ್ತಾನೆ. ಅಲ್ಲೀ ವೈಭವಯುತವಾಗಿ ನಿರ್ಮಾಣವಾಗಿತ್ತು ದ್ವಾರಕ ನಗರ.

ವೈಭವಯುತವಾದ ಆಡಳಿತದೊಂದಿಗೆ 16ಸಾವಿರ ರಕ್ಷಣಾ ಸ್ತ್ರಿಯರೊಂದಿಗೆ ಆರಾಮಾಗಿದ್ದ ಕೃಷ್ಣನ ಅಂತ್ಯ ಕಾಲ ಸಮೀಪಿಸುತ್ತೆ. ರಾಮಾಯಣದಲ್ಲಿ ವಾಲಿಗೆ ಕೊಟ್ಟ ಮಾತಿನಂತೆ ಬೇಡನೊಬ್ಬನ ಬಾಣದಿಂದ ಶ್ರೀಕೃಷ್ಣನ ಅಂತ್ಯವಾಗಿ ದ್ವಾಪರ ಯುಗ ಮುಗಿಯುತ್ತೆ. ಇತ್ತ ದ್ವಾರಕೆಯಲ್ಲಿ ಅವರವರ ನಡುವಿನ ಜಗಳ ಹೆಚ್ಚಾಗುತ್ತೆ. ಅಲ್ಲಿದ್ದವರೆಲ್ಲರೂ ನಗರವನ್ನ ಬಿಟ್ಟು ಬೇರೆ ಬೇರೆ ಕಡೆಗೆ ವಲಸೆ ಹೋಗ್ತಾರೆ..ಈ ರೀತಿ ವಲಸೆ ಹೋದ ಮೇಲೆ ಸಮುದ್ರ ರಾಜ ತನ್ನ ಭೂಮಿಯನ್ನ ವಾಪಸ್ ಪಡೆದುಕೊಂಡು ಬಿಡ್ತಾನೆ. ಈ ರೀತಿ ದ್ವಾರಕೆ ಸಮುದ್ರದಲ್ಲಿ ಮುಳುಗಿ ಹೋಯ್ತು.

ದೇಶದ ವಿಜ್ಞಾನಿಗಳು, ಅಂತರಾಷ್ಟ್ರೀಯ ಸಂಶೋಧಕರು, ದ್ವಾರಕ ನಗರದ ಇರುವಿಕೆ ಬಗ್ಗೆ ತಿಳಿದ ನಂತರ ಅದರ ಮೇಲೆ ಉತ್ಖನನ ಆರಂಭಿಸ್ತಾರೆ. ಸುಮಾರು 9 ಕಿಲೋಮೀಟರ್ ಉದ್ದ, 40 ಮೀಟರ್ ಆಳದ ಉತ್ಖನನವಾಗುತ್ತೆ. ಆಗಲೇ ಸುಮಾರು 9000 ವರ್ಷಗಳಿಗೂ ಮೀರಿದ ಪ್ರಾಚ್ಯ ವಸ್ತುಗಳು ದೊರಕುತ್ತವೆ. ಕೋಟೆಯ ಅವಶೇಷಗಳು, ಚಿನ್ನದ ನಾಣ್ಯಗಳು, ಮಡಿಕೆ ಕುಡಿಕೆಗಳು, ಮುಕ್ಕಾದ ವಸ್ತುಗಳು ದೊರಕಿದ್ವು, ಅರಮನೆ, ರಸ್ತೆ, ಸಭಾಂಗಣಗಳು ಗೋಚರಿಸಿದ್ವು. ದ್ವಾರಕೆ ಕಪೋಲ ಕಲ್ಪಿತ ಅನ್ನೋರೆಲ್ಲಾ ದ್ವಾರಕ ನಗರವಿರುವ ಸಮುದ್ರದ ಕಡೆಗೆ ತಿರುಗಿ ನೋಡಿದ್ರು..ಸಹಸ್ರಾರು ವರ್ಷದ ಹಿಂದೆ ದ್ವಾರಕ ನಗರವಿತ್ತು ಅನ್ನೋದನ್ನ ಒಪ್ಪ ತೊಡಗಿದ್ರು.

ಇದೀಗ ಗೋಮತಿ ನದಿ ತೀರದಲ್ಲಿ ಮತ್ತೊಂದು ದ್ವಾರಕಾ ನಗರ ಎದ್ದಿದೆ. ಆದರೆ ಪುರಾಣದಲ್ಲಿದ್ದ ದ್ವಾರಕೆಯನ್ನ ನೋಡೋಕೆ ಸಮುದ್ರದಾಳಕ್ಕೆ ಹೋಗಬೇಕು.. ಹೋಗಿ ಬರೋದು ಸುಲಭವಲ್ಲ. ಹೀಗಾಗಿ ಗುಜರಾತ್ ಟೂರಿಸಂ ದ್ವಾರಕಾ ನಗರ ವೀಕ್ಷಣೆಗೆ ಸಬ್ ಮೆರಿನ್ ಒಂದನ್ನ ಬಿಡೋಕೆ ಸಿದ್ದವಾಗಿದೆ. ಈ ಯೋಜನೆಗೆ ಅನುಮತಿಯೂ ಸಿಕ್ಕಿದೆ. ಖಾಸಗಿ ಕಂಪನಿಯೊಂದರ ಜೊತೆ ಒಡಂಬಡಿಕೆಯೂ ಮುಗಿದಿದೆ. ಬರುವ ಕೃಷ್ಣಾ ಜನ್ಮಾಸ್ಟಮಿಯೊಳಗೆ ಎಲ್ಲವೂ ಅಂದುಕೊಂಡಂತೆ ಆದ್ರೆ ಉದ್ಘಾಟನೆ ಕೂಡ ಆಗಲಿದೆ
ಇದೇ ಜನವರಿ 10ರಂದು ಗುಜರಾತಿನ ಗಾಂಧಿನಗರದಲ್ಲಿ ನಡೆಯುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮಾವೇಶದಲ್ಲಿ ಅಧಿಕೃತ ಘೋಷಣೆಯೂ ಆಗಲಿದೆ.

ಅಂದಾಗೆ ಜಲಾಂತರ್ಗಾಮಿಯಲ್ಲಿ ಒಮ್ಮೆಗೆ 30 ಜನ ಪ್ರಯಾಣಿಸಬಹುದು. 24 ಜನ ಪ್ರವಾಸಿಗರು, ಇಬ್ಬರು ಪೈಲೆಟ್ಗಳು, ಇಬ್ಬರು ಮುಳುಗು ತಜ್ಞರು ಓರ್ವ ತಂತ್ರಜ್ಞ ಹಾಗೂ ಓರ್ವ ಗೈಡ್ ಈ ನೌಕೆಯಲ್ಲಿ ಇರಲಿದ್ದಾನೆ. ನೇರವಾಗಿ ಸಮುದ್ರ ಕಾಣುವಂತೆ ಜಲಾಂತರ್ಗಾಮಿ ಆಸನ ವ್ಯವಸ್ಥೆಗಳು ತಯಾರಾಗಲಿವೆ. ಪ್ರವಾಸಿಗರಿಗೆ ಆಕ್ಸಿಜನ್ ಮಾಸ್ಕ್, ಲೈಫ್ ಜಾಕೇಟ್, ಮತ್ತು ಸ್ಕೂಬಾ ಸೂಟ್ ನೀಡಿ ದ್ವಾರಕೆಯನ್ನ ತೋರಿಸಿಕೊಂಡು ಬರುವ ವ್ಯವಸ್ಥೆ ಮಾಡಲಾಗುತ್ತೆ. ಒಟ್ನಲ್ಲಿಈ ಯೋಜನೆ ಸಕ್ಸಸ್ ಆದ್ರೆ, ದೇಶದ ಡಿಫರೆಂಟ್ ಪ್ರವಾಸಿ ತಾಣ ದ್ವಾರಕೆ ಅಂತ ಕರೆಸಿಕೊಳ್ಳೋದ್ರಲ್ಲಿ ನೋ ಡೌಟ್..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments