ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ಕೃಷ್ಣಾ ನದಿಯ ಪ್ರವಾಹದಿಂದ ದ್ವೀಪವಾಗಿ ಮಾರ್ಪಟ್ಟಿದೆ. ತಹಶಿಲ್ದಾರ್ ವಿಜಯ್‌ಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಸುರಕ್ಷತಾ ದೃಷ್ಟಿಯಿಂದ ಗ್ರಾಮದಲ್ಲಿದ್ದ ಮೂವರು ಗರ್ಭಿಣಿಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದಾರೆ.
9 ವರ್ಷಗಳ ಹಿಂದೆ ಗ್ರಾಮದ ಯಲ್ಲವ್ವ ಎಂಬ ಮಹಿಳೆ ಸುರಕ್ಷಿತ ಹೆರಿಗೆಗಾಗಿ ಕೃಷ್ಣಾ ನದಿ ಪ್ರವಾಹದಲ್ಲಿ ಈಜಿ ದಡ ಸೇರಿದ್ದಳು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಈಗಾಗಲೇ ಮುಂಜಾಗ್ರತೆವಹಿಸಿ ಜಿಲ್ಲಾಡಳಿತ ಗರ್ಭಿಣಿಯರನ್ನು ಸ್ಥಳಾಂತರ ಮಾಡಿದೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯುಸೆಕ್ ನೀರನ್ನು ಬಿಡಲಾಗಿದ್ದು, ಗ್ರಾಮದಲ್ಲಿ ನದಿಗೆ ನಿರ್ಮಿಸಿದ ಸೇತುವೆ ಮುಳುಗಡೆಯ ಹಂತದಲ್ಲಿದೆ. ನೀರಿನ ಮಟ್ಟ 2 ಅಡಿ ಏರಿಕೆಯಾದರೆ ಜಲಾವೃತಗೊಳ್ಳಲಿದೆ. ಇದರಿಂದಾಗಿ ಜಿಲ್ಲಾಡಳಿತ ಮೂಂಜಾಗ್ರತೆ ಕೈಗೊಂಡು ಗರ್ಭಿಣಿಯರನ್ನ ಸ್ಥಳಾಂತರ ಮಾಡಿದೆ. ವೈದ್ಯರಿಂದ ಗರ್ಭಿಣಿಯರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ನಂತರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


