Wednesday, January 28, 2026
27.8 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಅಸಲಿ ಚಿನ್ನಕ್ಕಾಗಿ ವೃದ್ಧೆ ಕೊಂದಿದ್ದ: ಸೇಠು ರೋಲ್ಡ್ ಗೋಲ್ಡ್ ಅಂದಿದ್ದ!

ಅಸಲಿ ಚಿನ್ನಕ್ಕಾಗಿ ವೃದ್ಧೆ ಕೊಂದಿದ್ದ: ಸೇಠು ರೋಲ್ಡ್ ಗೋಲ್ಡ್ ಅಂದಿದ್ದ!

ಬೆಂಗಳೂರಿನ ಕೆ.ಆರ್.ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ನಡೆದ ವೃದ್ಧೆ ಸುಶೀಲಮ್ಮ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಿನೇಶ್‌ ತಪ್ಪೊಪ್ಪಿಕೊಂಡಿದ್ದಾನೆ. ಶೀಲಮ್ಮಳನ್ನು ಉಸಿರುಗಟ್ಟಿಸಿ ಕೊಂದು, ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಮಾಡಿ ಡ್ರಮ್‌ಗೆ ತುಂಬಿಸಿ ಪಾಳು ಮನೆ ಬಳಿ ಬೀಸಾಕಿದ್ದ.

ಆರೋಪಿ ದಿನೇಶ್‌ ನಾಲ್ಕು ವರ್ಷಗಳ ಹಿಂದೆ ಚೆನ್ನೈನ ನೇವಿಯಲ್ಲಿ ಮರ್ಚಂಟ್ ಆಗಿ ಕೆಲಸ ಮಾಡಿಕೊಂಡಿದ್ದ. ಸುಮಾರು 30 ಲಕ್ಷ ರೂ.ನಷ್ಟು ಸಾಲ ಮಾಡಿಕೊಂಡಿದ್ದ. ಹೀಗಾಗಿ ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿನ ಕೆ.ಆರ್‌.ಪುರಂನಲ್ಲಿ ಮನೆ ಮಾಡಿಕೊಂಡಿದ್ದ. ಕೆಲಸ ಇಲ್ಲದೆ ರಾಜಕೀಯದಲ್ಲಿ ಭಾಗಿಯಾಗಲು ಯತ್ನಿಸಿ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಆಗ ಸುಶೀಲಮ್ಮಳನ್ನು ಪರಿಚಯ ಮಾಡಿಕೊಂಡಿದ್ದ.
ಇತ್ತೀಚಿಗೆ ಸಾಲಗಾರರ ಕಾಟ ಜಾಸ್ತಿಯಾಗಿತ್ತು. ಸಾಲ ಕೊಟ್ಟವರು ದಿನೇಶ್‌ ಮನೆ ಬಳಿಯೇ ಬರುತ್ತಿದ್ದ ಕಾರಣಕ್ಕೆ ಬೇಸತ್ತಿದ್ದ. ಈ ನಡುವೆ ಸುಶೀಲಮ್ಮ ಆಸ್ತಿಯನ್ನು ಮಾರಾಟ ಮಾಡಿ, ಕೋಟ್ಯಾಂತರ ರೂ. ಹಣ ಬಂದಿತ್ತು. ಈ ವಿಷಯ ತಿಳಿದಿದ್ದ ದಿನೇಶ್‌ ಹಣದ ಸಹಾಯವನ್ನು ಕೇಳಿದ್ದ. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಆಕೆಯ ಮೈಮೇಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಬಿದ್ದಿತ್ತು.

ಹೀಗಾಗಿ ಫೆ.24ರ ಮಧ್ಯಾಹ್ನ ದಿನೇಶ್‌ ವೃದ್ಧೆ ಸುಶೀಲಮ್ಮಳನ್ನು ಮನೆಗೆ ಕರೆಸಿಕೊಂಡಿದ್ದ. ನಂತರ ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ದೋಚಿದ್ದ. ಚಿನ್ನ ಕದ್ದು ಖುಷಿಯಲ್ಲಿದ್ದ ದಿನೇಶ್‌ಗೆ ನಿರಾಸೆಯಾಗಿತ್ತು. ಯಾಕೆಂದರೆ ಕಿವಿಯ ಓಲೆ ಬಿಟ್ಟರೇ ಉಳಿದಿದ್ದೆಲ್ಲವೂ ರೋಲ್ಡ್ ಗೋಲ್ಡ್ ಆಗಿತ್ತು. ಹೀಗಾಗಿ ಅದೇ ಚಿನ್ನದ ಓಲೆಯನ್ನು ಅಡವಿಟ್ಟು, ಆ ಹಣದಲ್ಲೇ ಡ್ರಮ್ ಖರೀದಿ ಮಾಡಿದ್ದ.

ತನ್ನದೇ ಮನೆಯಲ್ಲಿ ದಿನೇಶ್‌ ಅಜ್ಜಿಯ ಮೃತದೇಹದೊಂದಿಗೆ ಒಂದು ದಿನ ಕಳೆದಿದ್ದಾನೆ. ಫೆ. 24ರ ಮಧ್ಯಾಹ್ನಅಜ್ಜಿಯ ಮೃತದೇಹವನ್ನು ಸಾಗಿಸಲು ಆಗಿಲ್ಲ. ಹೀಗಾಗಿ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿದ್ದಾನೆ. ನಂತರ ಕೆ.ಆರ್.ಪುರಂ ಬಸ್ ಸ್ಟ್ಯಾಂಡ್ ಬಳಿ ಡ್ರಮ್ ಹಾಗೂ ಡಸ್ಟ್ ಬಿನ್ ಕವರ್ ಖರೀದಿ ಮಾಡಿದ್ದಾನೆ. ಫೆ.25 ರ ಮುಂಜಾನೆ 3:30ಕ್ಕೆ ವೃದ್ಧೆಯ ದೇಹವನ್ನು ತುಂಡು ತುಂಡಾಗಿ ಕಟ್ ಮಾಡಿ ಡ್ರಮ್‌ಗೆ ತುಂಬಿ ಬಿಸಾಡಲು ಪ್ಲಾನ್‌ ಮಾಡಿದ್ದ. ಅದರಂತೆ ಆವಲಹಳ್ಳಿ ಕೆರೆಗೆ ಮೃತದೇಹದ ಕೆಲ ಭಾಗಗಳನ್ನು ಬಿಸಾಡಿ ಬಂದಿದ್ದ.

ಮೃತದೇಹ ಬಿಸಾಡುವ ಮುನ್ನ ಮನೆಯ ಮುಂಭಾಗದ ಬೀದಿ ದೀಪವನ್ನು ಆಫ್‌ ಮಾಡಿದ್ದ. ಆ ನಂತರ ಮೃತದೇಹವಿದ್ದ ಡ್ರಮ್ ತಗೆದುಕೊಂಡು ಹೋಗಿ ಪಾಳು ಮನೆ ಬಳಿ ಬಿಸಾಡಿ ಬಂದಿದ್ದ. ಪೊಲೀಸರು ಸಿಸಿ ಟಿವಿ ಪರಿಶೀಲನೆ ವೇಳೆ ಆರೋಪಿ ಚಹರೆ ಪತ್ತೆಯಾಗಿತ್ತು. ಪೊಲೀಸರು ಆರೋಪಿ ದಿನೇಶ್‌ನನ್ನು ತೀವ್ರ ವಿಚಾರಣೆ ನಡೆಸಿದಾಗ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments