Wednesday, April 30, 2025
24 C
Bengaluru
LIVE
ಮನೆ#Exclusive NewsTop Newsರಕ್ತದಾನವೇ ಶ್ರೇಷ್ಠದಾನ, ಕೊಪ್ಪಳದಲ್ಲಿ ನಾಯಿಯಿಂದ ಈ ಮಾತು ಸಾಬೀತು!

ರಕ್ತದಾನವೇ ಶ್ರೇಷ್ಠದಾನ, ಕೊಪ್ಪಳದಲ್ಲಿ ನಾಯಿಯಿಂದ ಈ ಮಾತು ಸಾಬೀತು!

ಕೊಪ್ಪಳ: ರಕ್ತದಾನ ಶ್ರೇಷ್ಟದಾನ ಅಂತಾರೆ. ಆದರೆ ಇತ್ತೀಚೆಗೆ ಸೂಕ್ತ ಸಮಯದಲ್ಲಿ ಅವಶ್ಯವಿರುವ ರಕ್ತ ಸಿಗದೇ ಅನೇಕರು ಮೃತಪಡುತ್ತಿರೋ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ಸತ್ಯ.

ಕೊಪ್ಪಳದಲ್ಲಿ ನಿನ್ನೆ ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ನಗರದ ಪಶು ಚಿಕಿತ್ಸಾಲಯದಲ್ಲಿ, ಪ್ರಾಧ್ಯಾಪಕ ಬಸವರಾಜ ಪೂಜಾರ್ ರವರ ಸಾಕು ನಾಯಿ ಮೂರು ವಷ೯ದ ಭೈರವ(ಡಾಬರ್ ಮ್ಯಾನ್)ನಿಂದ ರಕ್ತದಾನ ಮಾಡಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅಂದರೇ ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9ವಷ೯ದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರುಗಳು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಶಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಿದರು. ಮೂರು ನಾಯಿಗಳ ಶಾಂಪಲ್ ಗಳಲ್ಲಿ ಪ್ರೊ.ಬಸವರಾಜ್ ಪೂಜಾರ್ ರವರ 3 ವಷ೯ದ ಡಾಬರ್ ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದ್ದು ವೈದ್ಯಕೀಯ ನಿಯಮಾನುಸಾರ ಇದರ 300 ಎಮ್ ಎಲ್ ರಕ್ತವನ್ನು ಪರೀಕ್ಷಿಸಿದ ಬಳಿಕ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ ಗೆ ನೀಡಲಾಗಿದೆ.

ಇದೊಂದು ಅವಿಸ್ಮರಣೀಯ ಘಟನೆಯಾಗಿದ್ದು, ಪ್ರಾಣಿ ಪ್ರಪಂಚದ ಅಭೂತಪೂವ೯ ಘಟನೆಯಾಗಿರುವುದು ಕೊಪ್ಪಳದಲ್ಲಿ ಎಂಬುದು ವಿಶೇಷ. ದಾನಗಳಲ್ಲಿ ರಕ್ತದಾನವೆ ಶ್ರೇಷ್ಟದಾನ”ಎಂಬುದಕ್ಕೆ ಪ್ರಾಣಿಗಳೂ ಕೂಡ ಸಾಥ್ ಕೊಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments