‘ಸುಬ್ರಹ್ಮಣ್ಯ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್…ಆರ್ಮುಗ ರವಿಶಂಕರ್ ಪುತ್ರ ಅದ್ವೈ ಭರ್ಜರಿ ಎಂಟ್ರಿ…
‘ಸುಬ್ರಹ್ಮಣ್ಯ’ನಾಗಿ ಆರ್ಮುಗ ರವಿಶಂಕರ್ ಪುತ್ರ ಅದ್ವೈ ಭರ್ಜರಿ ಎಂಟ್ರಿ..ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಗ್ಲಿಂಪ್ಸ್ ಅನಾವರಣ
ಸೈಮಾ ಅಂಗಳದಲ್ಲಿ ‘ಸುಬ್ರಹ್ಮಣ್ಯ’ ನ ಮೊದಲ ಝಲಕ್ ಅನಾವರಣ..ಸ್ಟೈಲೀಶ್ ಲುಕ್ ನಲ್ಲಿ ಅದ್ವೈ ಎಂಟ್ರಿ?

ಆರ್ಮುಗ ರವಿಶಂಕರ್ ‘ಸುಬ್ರಹ್ಮಣ್ಯ’ ಸಿನಿಮಾ ಮೂಲಕ ಮಗ ಅದ್ವೈ ಅವರನ್ನು ಸಿನಿಮಾಪ್ರೇಮಿಗಳಿಗೆ ಪರಿಚಯಿಸುತ್ತಿದ್ದಾರೆ. ಈ ಚಿತ್ರದ ಪ್ರೀ-ಲುಕ್ ಈಗಾಗಲೇ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ‘ಸುಬ್ರಹ್ಮಣ್ಯ’ನ ಫಸ್ಟ್ ಗ್ಲಿಂಪ್ಸ್ ನ್ನು ಅನಾವರಣ ಮಾಡಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಗೂ ಮೊದಲೇ ದುಬೈನಲ್ಲಿ ನಡೆದ ಸೈಮಾದಲ್ಲಿ ‘ಸುಬ್ರಹ್ಮಣ್ಯ’ನ ಮೊದಲ ತುಣುಕನ್ನು ರಿಲೀಸ್ ಮಾಡಲಾಯಿತು.

ಇಂದು ಎಸ್ ಜಿ ಮೂವೀಸ್ ಯೂಟ್ಯೂಬ್ ನಲ್ಲಿ ಸುಬ್ರಹ್ಮಣ ಗ್ಲಿಂಪ್ಸ್ ಬಿಡುಗಡೆಯಾಗಿದೆ. 3 ನಿಮಿಷ 14 ಸೆಕೆಂಡ್ ಇರುವ ಝಲಕ್ ಮೈನವಿರೇಳಿಸುವಂತಿದೆ. ವಿಷಪೂರಿತ ಹಾವುಗಳಿಂದ ತುಂಬಿದ ಬಾವಿಗೆ ಅದ್ವೈ ಹಗ್ಗದ ಮೂಲಕ ಎಂಟ್ರಿ ಕೊಡುತ್ತಾರೆ. ಆ ಬಾವಿಯಲ್ಲಿರುವ ಪುರಾತನ ಪುಸ್ತಕವನ್ನು ಎತ್ತಿಕೊಂಡು ಹೊರ ಬರ್ತಾರೆ. ಎಲ್ಲಾ ಹಾವುಗಳು ಅವನನ್ನು ಬೆನ್ನಟ್ಟುವುದರೊಂದಿಗೆ ಓಡಲು ಪ್ರಾರಂಭಿಸುತ್ತಾರೆ. ಅದ್ವೈ ಸ್ಟೈಲೀಶ್ ಲುಕ್ ನಲ್ಲಿ ನೋಡುಗರಿಗೆ ಇಷ್ಟವಾಗ್ತಾರೆ. ಕೊನೆಯ ಕೆಲ ಸೆಕೆಂಡ್ ಗಳು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ವಿಷ್ಯುವಲ್ಸ್ ಟ್ರೀಟ್ ಹಾಗೂ ಗ್ರಾಫಿಕ್ಸ್ ವರ್ಕ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ಸುಬ್ರಹ್ಮಣ ಗ್ಲಿಂಪ್ಸ್ ಅರವತ್ತಕ್ಕೂ ಹೆಚ್ಚು VFX ತಂತ್ರಜ್ಞನರು ಕಳೆದ ನಾಲ್ಕು ತಿಂಗಳಿನಿಂದ ದುಡಿದಿದ್ದಾರೆ. ‘ಸುಬ್ರಹ್ಮಣ್ಯ’ದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ VFX ಕೆಲಸ ನಡೆದಿದೆ. ‘ಸುಬ್ರಹ್ಮಣ್ಯ’ ಸಿನಿಮಾ ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ. ಜೊತೆ ಅಡ್ವೆಂಚರ್ ಎಲಿಮೆಂಟ್ಸ್‌ ಕೂಡ ಈ ಸಿನಿಮಾದಲ್ಲಿದೆ.

‘ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮರಾ ವರ್ಕ್ ಇದ್ದರೆ, ವಿಜಯ್ ಎಂ. ಕುಮಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಮಗನಿಗಾಗಿ ಎರಡು ದಶಕಗಳ ಬಳಿಕ ಡೈರೆಕ್ಟರ್ಕ್ಯಾಪ್ಧರಿಸಿರೋ ರವಿಶಂಕರ್ ಚಿತ್ರರಂಗಕ್ಕೆ ಹೀರೋ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕೊಡುತ್ತಿದ್ದಾರೆ.


Leave a Reply

Your email address will not be published. Required fields are marked *

Verified by MonsterInsights