ಬೆಂಗಳೂರು: ಕಿಚ್ಚ ಸುದೀಪ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿರ್ದೇಶಕರಾಗಬೇಕು ಎಂಬ ಕನಸಿನೊಂದಿಗೆ ಬಂದ ಅವರು ಆಗಿದ್ದು ಹೀರೋ. ಆ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟರು. ನಿರ್ಮಾಪಕ ಕೂಡ ಆದರು. ಈಗಲೂ ಕಿಚ್ಚನಿಗೆ ಡೈರೆಕ್ಷನ್ ಎಂದರೆ ಹೆಚ್ಚು ಇಷ್ಟ. ಸುದೀಪ್ ಅವರು ಕನ್ನಡದ ಶ್ರೀಮಂತರ ನಟರಲ್ಲಿ ಒಬ್ಬರು. ಅವರು ನೂರಾರು ಕೋಟಿ ರೂಪಾಯಿಯ ಒಡೆಯ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸುದೀಪ್ ಅವರ ಒಟ್ಟೂ ಆಸ್ತಿ ಸರಿಸುಮಾರು 125 ಕೋಟಿ ರೂಪಾಯಿ. ಸಿನಿಮಾಗಳಿಂದ, ಬ್ರ್ಯಾಂಡ್ಗಳ ಪ್ರಚಾರದಿಂದ ಸುದೀಪ್ಗೆ ಹಣ ಬರುತ್ತಿದೆ. ಅವರು ಐಷಾರಾಮಿ ಜೀವನ ನಡೆಸುತ್ತಾ ಇದ್ದಾರೆ. ಅವರ ಬಳಿಕ ಹಲವು ಕಾರುಗಳು ಕೂಡ ಇವೆ. ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.
ಸುದೀಪ್ ಅವರು ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಹೊಂದಿದ್ದಾರೆ. ಇದರ ಬೆಲೆ 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಅನೇಕ ಕಡೆಗಳಲ್ಲಿ ಜಾಗ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ಸುದೀಪ್ ಅವರು ಫಾರ್ಮ್ಹೌಸ್ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಜಾಗಗಳ ಬೆಲೆ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ.
ಸುದೀಪ್ ಅವರು ನಿರ್ಮಾಪಕ ಕೂಡ ಹೌದು. ಸುದೀಪ್ ಅವರು ‘ಕಿಚ್ಚ ಕ್ರಿಯೇಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಮೂಲಕ ಅವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಹಲವು ಚಿತ್ರಗಳಿಗೆ ಅವರು ಬಂಡವಾಳ ಹೂಡಿದ್ದಾರೆ.
ಸುದೀಪ್ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಅವರು ಪ್ರತಿ ಬ್ರ್ಯಾಂಡ್ನ ಪ್ರಚಾರ ರಾಯಭಾರಿ ಆಗಲು ಬರೋಬ್ಬರಿ 5 ಕೋಟಿ ರೂಪಾಯಿ ಪಡೆಯುತ್ತಾರೆ. ಸುದೀಪ್ ಅವರಿಗೆ ಕಾರುಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಟೊಯೊಟಾ ವೆಲ್ಫೈರ್, ಲ್ಯಾಂಬೋರ್ಗಿನಿ, ಸ್ಲೀಕ್ ಹಮ್ಮರ್ 3, ಸಲ್ಮಾನ್ ಖಾನ್ ಉಡುಗೆಯಾಗಿ ನೀಡಿದ ಬಿಎಂಡಬ್ಲ್ಯೂ, ಜೀಪ್ ಕಂಪಾಸ್ ಕಾರುಗಳನ್ನು ಹೊಂದಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com