#Exclusive NewsTop Newsಮನರಂಜನೆಸಿನಿಮಾಸುದ್ದಿ
ಕಿಚ್ಚ ಸುದೀಪ, ಫ್ಯಾನ್ಸ್ಗೆ ಎಂದೆಂದಿಗೂ ಸಮೀಪ ; ವಿಜಯ ಪ್ರಕಾಶ್

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವಾಗಲೇ ‘ಮ್ಯಾಕ್ಸ್’ ಸಕ್ಸಸ್ನ ಎಂಜಾಯ್ ಮಾಡಲು ಬೇರೆ ಬೇರೆ ವೇದಿಕೆ ಏರುತ್ತಿದ್ದಾರೆ. ಅವರು ಈಗ ‘ಸರಿಗಮಪ’ ವೇದಿಕೆಗೆ ಬಂದಿದ್ದಾರೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಈ ಕಾರ್ಯಕ್ರಮದ ಮುಖ್ಯ ಜಡ್ಜ್ ಆಗಿದ್ದಾರೆ.
2011ರಲ್ಲಿ ಬಂದ ‘ಕೆಂಪೇಗೌಡ’ ಚಿತ್ರ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ಚಿತ್ರದ ಹಾಡನ್ನು ಹಾಡಿದ್ದರು.
‘ಕೆಂಪೆಗೌಡ’ ಚಿತ್ರದ ಎರಡು ರತ್ನಗಳು.ವಿಜಯ ಪ್ರಕಾಶ್ ಅವರು ಧ್ವನಿ ಆದ್ರು, ನಾನು ದೇಹ ಆಗಿದ್ದೇನೆ’ ಎಂದರು ಸುದೀಪ್. ಅವರು ಸುದೀಪ್ನ ಹಾಡಿ ಹೊಗಳಿದ್ದಾರೆ. ಅವರಿಗಾಗಿ ಒಂದೆರೆಡು ಸಾಲುಗಳನ್ನು ಕೂಡ ಬರೆದು ಹೇಳಿದ್ದಾರೆ.
ಕಿಚ್ಚ ಸುದೀಪ, ಫ್ಯಾನ್ಸ್ಗೆ ಎಂದೆಂದಿಗೂ ಸಮೀಪ..
ನನ್ನಂತ ಅದೆಷ್ಟೋ ಕಲಾವಿದರಿಗೆ ಆಗಿದ್ದಾರೆ ದಾರೀ ದೀಪ..
ವೆಲ್ಕಮ್ ಟು ಸರೆಗಮಪ.. ಎಂದರು ವಿಜಯ್ ಪ್ರಕಾಶ್.
ವಿಜಯ್ ಅವರು ಬರೆದ ಪ್ರಾಸಬದ್ಧ ಸಾಲುಗಳು ಅಲ್ಲಿ ಕುಳಿತಿದ್ದವರಿಗೆ ಇಷ್ಟ ಆಯಿತು. ಈ ಕಾರಣಕ್ಕೆ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದರು.




