ತಮಿಳಿನ ಜನಪ್ರಿಯ ನಟಿ ವರಲಕ್ಷ್ಮಿ ಶರತ್‌ಕುಮಾರ್ ಬಹುಕಾಲದ ಗೆಳೆಯ ನಿಕೊಲಾಯ್ ಜೊತೆ ಥೈಲ್ಯಾಂಡ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜು.3ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದು, ಕನ್ನಡದ ಸ್ಟಾರ್ ನಟ ಸುದೀಪ್ ಕುಟುಂಬ ಮತ್ತು ಸೌತ್‌ನ ಸ್ಟಾರ್ ಕಲಾವಿದರ ದಂಡೇ ಭಾಗಿಯಾಗಿತ್ತು.
ಹಿರಿಯ ನಟ ಶರತ್ ಕುಮಾರ್ ಮತ್ತು ರಾಧಿಕಾ ದಂಪತಿ ಪುತ್ರಿಯ ಮದುವೆ ಆರತಕ್ಷತೆಗೆ ಸುದೀಪ್ ಫ್ಯಾಮಿಲಿ ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ. ಸುದೀಪ್ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಸುದೀಪ್ ಕುಟುಂಬದ ಜೊತೆ ವರಲಕ್ಷ್ಮಿ ಉತ್ತಮ ಒಡನಾಟ ಹೊಂದಿದ್ದಾರೆ. ಮಾಣಿಕ್ಯ, ರನ್ನ, ಮತ್ತು ಇದೀಗ ಬರಲಿರುವ ಮ್ಯಾಕ್ಸ್ ಸಿನಿಮಾದಲ್ಲಿ ವರಲಕ್ಷ್ಮಿ ನಟಿಸಿದ್ದಾರೆ.
ನಟಿಯ ಆತರಕ್ಷತೆಯಲ್ಲಿ ತಮಿಳು ನಟ ಸಿದ್ಧಾರ್ಥ್, ಬಾಲಯ್ಯ, ನಟಿ ತ್ರಿಷಾ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.
ಅಂದಹಾಗೆ, ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com