ಬೆಂಗಳೂರು: ಕಾಂಗ್ರೆಸ್ಗೆ ಸೆಡ್ಡು ಹೊಡೆದ ಕುಬೇರ ಕೆಜಿಎಫ್ ಬಾಬುಗೆ RTO ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ. ವಸಂತನಗರದಲ್ಲಿರುವ ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅಮಿತಾಬ್ ಬಚ್ಚನ್, ಆಮೀರ್ ಖಾನ್‌ರಿಂದ ಖರೀದಿಸಿದ್ದ ರೋಲ್ಸ್ ರಾಯ್ಸ್ ಕಾರುಗಳನ್ನು ಸೀಜ್ ಮಾಡಲು ಮುಂದಾಗಿದ್ದಾರೆ.
ಕೆಜಿಎಫ್ ಬಾಬು ಐಶಾರಾಮಿ ಕಾರುಗಳಿಗೆ ಟ್ಯಾಕ್ಸ್ ಕಟ್ಟಿಲ್ಲ ಎಂಬ ಆರೋಪ ಹಿನ್ನಲೆ RTO ಅಧಿಕಾರಿಗಳು ದಾಳಿ ಮಾಡಿ ಜಪ್ತಿಗೆ ಮುಂದಾಗಿದ್ದಾರೆ. ಬಿಗ್ ಬಿ ಬಚ್ಚನ್ರಿಂದಲೇ ರೋಲ್ಸ್ ರಾಯ್ ಕಾರು ಖರೀದಿಸಿದ್ದ KGF ಬಾಬು ಟ್ಯಾಕ್ಸ್ ಕಟ್ಟಿಲ್ಲ ಎಂದು ಆರೋಪಿ ದಾಳಿ ಮಾಡಿದ್ದಾರೆ.
RTO ಜಂಟಿ ಆಯುಕ್ತರಾದ ಶೋಭಾ ನೇತೃತ್ವದ ತಂಡವು ಕೆಜಿಎಫ್ ಬಾಬು ಅವರ ವಸಂತನಗರದ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಗೇಟ್ ತೆಗೆಯದೆ ಕೆಜಿಎಫ್ ಬಾಬು ಮೊಂಡಾಟ ಪ್ರದರ್ಶಿಸಿದರು. ಹೀಗಾಗಿ, ಕೆಲ ಹೊತ್ತು ಅವರ ಮನೆ ಮುಂದೆಯೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಆರ್ಟಿಒ ಅಧಿಕಾರಿಗಳಿಗೆ ಬಂತು.
ಇನ್ನು ಈ ಬಗ್ಗೆ ಕೆಜಿಎಫ್ ಬಾಬು ಪ್ರತಿಕ್ರಿಯೆ ನೀಡಿದ್ದು, ನಾನು ತೆರಿಗೆ ಕಟ್ಟಲ್ಲ, ನಾನು ಯಾಕೆ ತೆರಿಗೆ ಕಟ್ಟಬೇಕು.
ನನ್ನ ಕಾರುಗಳು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿವೆ.ಮುಂಬೈ ನೋಂದಣಿ ಹೊಂದಿರುವ ಕಾರುಗಳಿಗೆ ಅಲ್ಲಿ ತೆರಿಗೆ ಕಟ್ಟಿದ್ದೇನೆ. ಇಲ್ಲೂ ತೆರಿಗೆ ಕಟ್ಟಿ ಅಂದ್ರೆ ತೆರಿಗೆ ಕಟ್ತೇನೆ ಆದ್ರೆ ನನ್ನ ಕಾರುಗಳನ್ನು ಯಾಕೆ ಸೀಜ್ ಮಾಡ್ಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ.


