Tuesday, March 3, 2026
27.3 C
Bengaluru
Google search engine
LIVE
ಮನೆ#Exclusive NewsTop News#KarnatakaRains: ಶಾಕ್ ಕೊಟ್ಟ ಮಳೆರಾಯ; ನಾಳೆಯಿಂದ ಮಳೆ ಇಲ್ಲ!

#KarnatakaRains: ಶಾಕ್ ಕೊಟ್ಟ ಮಳೆರಾಯ; ನಾಳೆಯಿಂದ ಮಳೆ ಇಲ್ಲ!

ಕಡು ಬೇಸಿಗೆಯಲ್ಲಿಯೂ ಮಳೆ ಬಂತೆಂದು ಖುಷಿಯಾಗಿದ್ದ ಕರ್ನಾಟಕ ಜನತೆಗೆ ವರುಣದೇವ ಶಾಕ್ ನೀಡಿದ್ದಾನೆ. ಎಲ್ಲರೂ ಇನ್ನೂ ಎರಡ್ಮೂರು ದಿನ ಮಳೆ ಆಗಲಿದೆ ಎಂದು ಭಾವಿಸಿದ್ದರು. ಆದರೆ, ಬೆಂಗಳೂರಿನ ಐಎಂಡಿ ಮಾಹಿ ಪ್ರಕಾರ ನಾಳೆಯಿಂದ ರಾಜ್ಯದಲ್ಲಿ ಮಳೆ ಬೀಳಲ್ಲ.

ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಕರ್ನಾಟಕದಲ್ಲಿ ಭಾನುವಾರ ಗುಡುಗು ಮಿಂಚು ಸಹಿತ ಮಳೆ ಆಗಲಿದೆ.ಕರಾವಳಿ ಕರ್ನಾಟಕದಲ್ಲಿ ಮಳೆಗೆ ಬಿರುಗಾಳಿಯೂ ಜೊತೆ ಆಗಲಿದೆ.

ಆದರೆ, ಏಪ್ರಿಲ್ 22, ಏಪ್ರಿಲ್ 23, ಏಪ್ರಿಲ್​ 24, ಏಪ್ರಿಲ್ 25ರಂದು ಮಳೆ ಆಗುತ್ತೆ ಎನ್ನುವುದನ್ನು ಐಎಂಡಿ ಖಾತ್ರಿ ಪಡಿಸಿಲ್ಲ. ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆ ಬೀಳುವ ಯಾವುದೇ ಲಕ್ಷಣ ಇಲ್ಲ. ಹೀಗಾಗಿ ನೋ ವಾರ್ನಿಂಗ್ ಎಂದು ಬೆಂಗಳೂರಿನ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ವಿಸ್ತಾರವಾಗಿ ಮಳೆ ಬಿದ್ದಿದೆ. ಅದರಲ್ಲೂ ಕಲಬುರಗಿಯ ಆಳಂದ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿವ ಮಟ್ಟಕ್ಕೆ ಮಳೆಯಾಗಿದೆ. ಧಾರವಾಡದಲ್ಲಿ 90 ಮಿಲಿಮೀಟರ್​ಗೂ ಅಧಿಕ ಮಳೆಯಾಗಿದೆ. ಇಂದು ಚಾಮರಾಜನಗರ ಸುತ್ತಮುತ್ತ ಮಳೆ ಆಗುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments