ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಟಫ್ ಫೈಟ್ ನಡೆಯಲಿದೆ. 2023ರ ವಿಧಾನಸಭಾ ಎಲೆಕ್ಷನ್ ನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 16 ಮತಗಳ‌ ಅಂತರದಿಂದ ಪರಾಜಿತರಾಗಿದ್ದ ಸೌಮ್ಯ ರೆಡ್ಡಿ ಮತ್ತೊಮ್ಮೆ ಅದೃಷ್ಟ ‌ಪರೀಕ್ಷೆಗೆ ಮುಂದಾಗಿದ್ದಾರೆ ..ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಬೇಕು ಎಂಬ ಕೈ ನಾಯಕರ ಬೇಡಿಕೆಯನ್ನು ಮಾಜಿ ಶಾಸಕಿ ಸೌಮ್ಯ ರೆಡ್ಡಿ ತಿರಸ್ಕರಿಸಿದ್ದರು..ಕಾಂಗ್ರೆಸ್ ಹಿರಿಯ ನಾಯಕರಾದ ರಣದೀಪ್‌ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆಶಿ ಒತ್ತಾಯದ ಮೇರೆಗೆ ಸೌಮ್ಯ ರೆಡ್ಡಿ ಕಡೆಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿದ್ದಾರೆ ..ಇವೆಲ್ಲದರ ನಡುವೆ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇತ್ತೀಚಿಗೆ ನಡೆದ ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರಮುಖರ ಸಭೆಯಲ್ಲಿ ಸೌಮ್ಯ ರೆಡ್ಡಿ ಅವರೇ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ..ಈ ಹಿನ್ನೆಲೆಯಲ್ಲಿ ಸೌಮ್ಯ ರೆಡ್ಡಿ ಅವರು ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಕಳೆದ ವಿಧಾನಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಮತ ಎಣಿಕೆ ಗೊಂದಲದ ಬಳಿಕ ಅಂತಿಮವಾಗಿ 16 ಮತಗಳಿಂದ ಸೌಮ್ಯ ರೆಡ್ಡಿ ಸೋಲನುಭವಿಸಿದ್ದರು. ಅಂದಿನಿಂದಲೇ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂದು ಕಾಂಗ್ರೆಸ್‌ ವಲಯದಲ್ಲಿ ಸುದ್ದಿಯಾಗಿತ್ತು.ಇದೀಗ ಲೋಕ ಸಮರಕ್ಕೆ ಧುಮಿಕಿರುವ ಸೌಮ್ಯ ‌ರೆಡ್ಡಿ ,ಜಯನಗರದ ಕ್ಷೇತ್ರದಲ್ಲಿ ತಾವು ಮಾಡಿರುವ ಹಲವು‌ ಅಭಿವೃದ್ಧಿ ಕಾರ್ಯಗಳು ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ .. ಕಾಂಗ್ರೆಸ್ ಸರ್ಕಾರದ ಭಾಗ್ಯ ಯೋಜನೆಗಳು ಹಾಗೂ ತಂದೆ ರಾಮಲಿಂಗಾರೆಡ್ಡಿರವರ ರಾಜಕೀಯ ‌ಚಾಣಾಕ್ಷತೆ ಸೌಮ್ಯರೆಡ್ಡಿ ಲೋಕಾ ಚುನಾವಣೆಯಲ್ಲಿ ಜನರ ಮನ ಗೆಲ್ಲಲು ಕಾರಣವಾಗಲಿದೆ ಎಂಬ ನಿರೀಕ್ಷೆ ಇದೆ ..ಜೊತೆಗೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸಿದ ಸರ್ವೇಗಳಲ್ಲಿ ಸೌಮ್ಯ ರೆಡ್ಡಿ ಪರವಾಗಿರುವುದು ಸೌಮ್ಯ ರೆಡ್ಡಿಯವರಲ್ಲಿ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿದೆ ..

By admin

Leave a Reply

Your email address will not be published. Required fields are marked *

Verified by MonsterInsights