ರಾಜ್ಯ
ಕರ್ನಾಟಕ ಕಂಡ ದಕ್ಷ ಪೋಲಿಸ್ ಅಧಿಕಾರಿ ಬಿ.ಎನ್.ಗರುಡಾಚರ್ ನಿಧನ

ಬೆಂಗಳೂರು: ಕರ್ನಾಟಕ ಕಂಡ ದಕ್ಷ ಅಧಿಕಾರಿ ನಿವೃತ್ತ ಪೊಲೀಸ್ ಕಮಿಷನರ್ ಬಿ.ಎನ್.ಗರುಡಾಚಾರ್(96) ಇಂದು ನಿಧನರಾಗಿದ್ದಾರೆ
ಮೂಲತಃ ಮಂಡ್ಯ ಜಿಲ್ಲೆಯ, ಬಿಂಡಿಗೇನವಿಲೆ ಗ್ರಾಮದ ಗರುಡಾಚಾರ್ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತದ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಂತರ ಬೆಂಗಳೂರು ಜಿಲ್ಲೆಯ ಎಸ್.ಪಿ ಹಾಗೂ ಬೆಂಗಳೂರು ಮಹಾನಗರದ ಡಿ.ಸಿ.ಪಿ ಯಾಗಿ ಮತ್ತು ಪೊಲೀಸ್ ಕಮಿಷನರ್ ಆಗಿ. ಡಿಜಿ/ಐಜಿಪಿ ಸೇವೆ ಸಲ್ಲಿಸಿದ್ದಾರೆ.
ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತೀಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತೀಮ ಸಂಸ್ಕಾರವು ವಿಲ್ಸನ್ ಗಾರ್ಡನ್ನ ವಿದ್ಯುತ್ ಚಿತಾಗಾರದಲ್ಲಿ ಶನಿವಾರ ಸಂಜೆ ನಡೆಯಲಿದೆ ಎಂದು ಅವರ ಪುತ್ರ ಶಾಸಕ ಉದಯ್ ಗರುಡಾಚಾರ್ ತಿಳಿಸಿದ್ದಾರೆ.




