KC Cariappa; ಆತ ಕರ್ನಾಟಕದ ಖ್ಯಾತ ಲೆಗ್ ಸ್ಪಿನ್ನರ್..ಎಲ್ಲವೂ ಸರಿಯಾಗಿ ಇದ್ದಿದ್ರೆ, ಕ್ರಿಕೆಟ್ ಲೋಕದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದಿತ್ತು. ಆದ್ರೆ ಅವನ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ..ಎಲ್ಲರಂತೆ ಆತ ಕೂಡ ಅದೊಬ್ಬಳು ಹೆಣ್ಣನ್ನು ನಂಬಿದ್ದ. ನಂಬಿದ್ದೇ ಆಕೆಗೆ ವರವಾಗಿತ್ತು ಅನ್ಸುತ್ತೆ. ಇದೀಗ ಸರಿಯಾಗಿ ಫಿನಿಶಿಂಗ್ ಕೊಟ್ಟಿದ್ದಾಳೆ..ಕ್ರಿಕೆಟ್ ಮೈದಾನದಲ್ಲಿ ಚೆಂಡು ತಿರುಗಿಸುವ ಚಾಣಾಕ್ಷನಿಗೆ ಆ ಹೆಣ್ಣು ಮಗಳು ಚಳ್ಳೆ ಹಣ್ಣು ತಿನ್ನಿಸಿದ್ದಾಳೆ.
ಹೌದು..ಕ್ರಿಕೆಟರ್ ಕಾರ್ಯಪ್ಪ ಮತ್ತು ಅವನಿಗೆ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪರಿಚಯವಾದ ಹೆಣ್ಣು ಮಗಳ ನಡುವೆ ಪರಿಚಯವಾಗಿತ್ತು ಎನ್ನಲಾಗುತ್ತೆ. ಅದೇ ಪರಿಚಯ ಮುಂದೆ ಪ್ರೇಮಕ್ಕೆ ತಿರುಗಿದೆ. ಪ್ರೇಮ ಕಾಮದ ರೂಪ ಪಡೆದಿದೆ. ಈ ವಿಚಾರ ದಿನಕಳೆದಂತೆ ಜನ ಸಾಮನ್ಯರ ಕಿವಿಯನ್ನೂ ಕಚ್ಚಿತ್ತು. ಅವರಿಬ್ಬರು ಮದುವೆ ಆಗ್ತಾರೆ ಅಂತಲೂ ಕೆಲವರು ಮಾತಾಡಿಕೊಂಡಿದ್ರು. ಆದ್ರೆ ಪ್ರೀತಿ ಪ್ರೇಮ ಕಾಮ..ಮುಂದೆ ಪಂಗನಾಮ ಎಂಬಂತೆ ಇದೀಗ ಇಬ್ಬರ ಪ್ರೀತಿ ಮ್ಯಾಟ್ರು ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.

ಕಾರ್ಯಪ್ಪ ಲವ್ವು ಗಿವ್ವು ಅಂತ ನನ್ನ ತಲೆ ಕೆಡಿಸಿದ..ಅಮೇಲೆ ಮದುವೆ ಆಗ್ತೀನಿ ಅಂತ ಭರವಸೆ ಕೊಟ್ಟ.. ನಾನು ನಂಬಿ ಯಾಮಾರಿಬಿಟ್ಟೆ.. ನಮ್ಮಿಬ್ಬರ ನಡುವೆ ಮಿಲನ ಮಹೋತ್ಸವವೂ ನಡೆದಿತ್ತು.. ಈಗ ನನ್ನ ವಿರುದ್ಧ ಅಪಪ್ರಚಾರ ಮಾಡ್ತಾ ಇದ್ದಾನೆ..ನನಗೆ ನ್ಯಾಯ ಕೊಡ್ಸಿ ಅಂತ ಆಕೆ ವರ್ಷದ ಹಿಂದೆ ಠಾಣೆ ಮೆಟ್ಟಿಲೇರಿ ಕಣ್ಣೀರು ಇಟ್ಟಿದ್ಲು.. ಇದೀಗ ಕಾರ್ಯಪ್ಪ ಅವಳು ನನಗೆ ನಂಬಿಸಿ ಇದ್ದ ಬದ್ದ ಕಾಸನ್ನೆಲ್ಲ ಕಿತ್ಕೊಂಡು ವಂಚಿಸಿದ್ಲು ಅಂತ ಸ್ಪಿನ್ ಮಾಂತ್ರಿಕ ಹೇಳ್ತಿದ್ದಾನೆ. ಅಲ್ಲೇ ನನಗೂ ನನ್ನ ಕುಟುಂಬಕ್ಕೂ ಬೆದರಿಕೆ ಹಾಕ್ತಿದ್ದಾಳೆ.. ನನಗೆ ರಕ್ಷಣೆ ಕೊಡಿ ಅಂತ ಈತ ಕೂಡ ಬಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ..

ಅಸಲಿಗೆ ಇಲ್ಲಿ ಆಗಿರೋದಾದ್ರೂ ಏನು ಅಂತ ಇವರಿಬ್ಬರ ಪ್ರೇಮ ಪಯಣದ ಪುಸ್ತಕದ ಪುಟ ತೆರೆದು ನೋಡಿದ್ರೆ, ಕಾಣಿಸೋದು ಅಸಲಿ ಸತ್ಯ. ಹೌದು..ಕ್ರಿಕೆಟರ್ ಕಾರ್ಯಪ್ಪ, ಕರ್ನಾಟಕ ಕಂಡಂತಹ ಲೆಗ್ ಸ್ಪಿನ್ ಮಾಂತ್ರಿಕ.. ಭವಿಷ್ಯದಲ್ಲಿ ಅನಿಲ್ ಕುಂಬ್ಳೆ ಆಗ್ತಾನೆ.. ಅಂತ ಎಲ್ಲರೂ ಭಾವಿಸಿದ್ರು ಆದ್ರೆ ಆಗ್ತಾ ಇರೋದೆ ಬೇರೆ.. ಅಂದಾಗೆ ಮೂಲತಃ ಕೊಡಗಿನ ಕಾರ್ಯಪ್ಪ, ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್ ನಿವಾಸಿ..
ಇನ್ನು ಈತನ ಕ್ರಿಕೆಟ್ ಸ್ಪಿನ್ಗೆ ಕ್ಲೀನ್ ಬೋಲ್ಡ್ ಆದವಳು ಅವನದೇ ಕೊಡಗಿನ ಓರ್ವ ಹೆಣ್ಣು ಮಗಳು…ಒಂದಷ್ಟು ದಿನ ಇಬ್ಬರ ಲವಿ ಡವಿ ಚೆನ್ನಾಗಿಯೇ ನಡೆದಿತ್ತು. ಬಳಿಕ ಆದೇನಾಯ್ತೋ ಏನೋ ಗೊತ್ತಿಲ್ಲ..ಇಬ್ಬರ ನಡುವೆ ಬ್ರೇಕ್ ಅಪ್ ಕಥೆ-ವ್ಯಥೆ.. ಅವಳ ಮೇಲೆ ಇವನು..ಇವನ ಮೇಲೆ ಅವಳು..ಮುಗಿಬಿದ್ರು.. ಜಗಳ ತಾರಕ್ಕಕ್ಕೇರುತ್ತಲೇ ಬಗಲಗುಂಟೆ ಠಾಣೆಗೆ ಬಂದ ಆಕೆ ಡಿಸೆಂಬರ್ 31, 2022ರಲ್ಲಿ ದೂರೊಂದನ್ನ ದಾಖಲಿಸಿದ್ಲು. ಇದೀಗ ಆ ದೂರಿಗೆ ವರ್ಷ ತುಂಬುವ ಮುನ್ನವೇ ಅದೇ ಬಗಲಗುಂಟೆ ಠಾಣೆಯಲ್ಲಿ ಕ್ರಿಕೆಟರ್ ಕಾರ್ಯಪ್ಪ ಕೂಡ ದೂರು ದಾಖಲಿಸಿದ್ದಾರೆ.

ಒಂದು ಕಡೆ ಅವಳು ನನ್ನ ಗರ್ಭವತಿ ಮಾಡಿ ಅಬಾಷನ್ ಮಾತ್ರೆ ತಂದುಕೊಟ್ಟು ಇನ್ನಿಲ್ಲದಂತೆ ಕಾಡಿದ್ದ..ಅಲ್ಲದೇ ನನ್ನಿಂದ ಹಣವನ್ನೂ ಕಿತ್ತುಕೊಂಡಿದ್ದ ಅಂತ ಹೇಳ್ತಿದ್ರೆ, ಇತ್ತ ಕಾರ್ಯಪ್ಪ ತನ್ನ ದೂರಿನಲ್ಲಿ ಅವಳಿಗೆ ಕುಡಿತದ ಚಟವಿದೆ. ಅದನ್ನ ಬಿಡು ಅಂತ ಹೇಳಿದ್ರು ಕೇಳಲಿಲ್ಲ..ಇವಳು ನನ್ನ ಕುಟುಂಬಕ್ಕೆ ಸರಿ ಹೋಗೋದಿಲ್ಲ ಅಂತ ಸಂಬಂಧ ಮುರಿದುಕೊಂಡೆ ಇದೀಗ ನನ್ನ ಹೆದರಿಸಿ, ನನ್ನ ಕ್ರಿಕೆಟ್ ಲೈಫ್ ಡ್ಯಾಮೇಜ್ ಮಾಡೋದಾಗಿ ಬೆದರಿಸಿ ಹಣ ಕಿತ್ತಿದ್ದಾಳೆ. ನನಗೆ ರಕ್ಷಣೆ ಕೊಡಿ ಅಂತಿದ್ದಾನೆ. ಒಟ್ನಲ್ಲಿ ಎರಡು ಕಡೆ ದೂರು ದಾಖಲಾಗಿದೆ. ಕಾರ್ಯಪ್ಪನ ಕೆರಿಯರ್ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಬಗಲಗುಂಟೆ ಮತ್ತು ಆರ್ ಟಿ ನಗರ ಠಾಣೆಗಳಲ್ಲಿ ಪ್ರಕರಣಗಳಿವೆ…ಪ್ರೀತಿ ಪ್ರೇಮ ನಂಬಿದ್ರೆ ಪಂಗನಾಮ ಅನ್ನೋದು ಇದಕ್ಕೆ ಅನ್ಸುತ್ತೆ ಅಲ್ವಾ..?