ಮಂಗಳೂರು: ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ಹಿನ್ನಲೆ ದಕ್ಷಿಣ ಜಿಲ್ಲೆಯ ಕನ್ನಡ ಪರ ಸೇರಿದಂತೆ ಯಾವುದೇ ಸಂಘಟನೆಗಳು ಬಂದ್ ಬೆಂಬಲಿಸಲ್ಲ. ಬಸ್ ಮಾಲಿಕರ ಸಂಘ ಹಾಗೂ ಕೆನರಾ ಬಸ್ ಮಾಲಕರ ಸಂಘ ಬಂದ್ಗೆ ಸ್ಪಂದಿಸಿವುದಿಲ್ಲ ಎಂದು ತಿಳಿಸಿದೆ.
ಎಲ್ಲ ಸಂಘಟನೆಗಳ ಬೇಡಿಕೆಗೆ ನಮ್ಮ ಸಹಮತ, ಸಹಾನುಭೂತಿ ಇದೆ. ಬಸ್ ಮಾಲಕರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಶನಿವಾರ ಬಸ್ ಬಂದ್ ಮಾಡುವುದಿಲ್ಲ. ಇತರ ಸಾಮಾನ್ಯ ದಿನಗಳಂತೆ ಬಸ್ಗಳು ಓಡಾಡಲಿವೆ. ಸಾರ್ವಜನಿಕರ ಹಿತದೃಷ್ಟಿ, ಮುಖ್ಯವಾಗಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಬಂದ್ ಮಾಡುವುದಿಲ್ಲ ಎಂದು ದ.ಕ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಜ್ ಪರ್ತಿಪಾಡಿ ತಿಳಿಸಿದ್ದಾರೆ.