ರಾಜಧಾನಿಯಲ್ಲಿ ಕನ್ನಡ ನಾಮಫಲಕ ವಿಚಾರವಾಗಿ ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಅದೇರೀತಿಯಾಗಿ ವಿವಿಧ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಕನ್ನಡ ಬೋರ್ಡ ಅಳವಡಿಕೆ ಮಾಡಬೇಕು ಎಂದು ಕರವೆ ಕಾರ್ಯಕರ್ತರ ಪ್ರತಿಭಟನಾ ರ್ಯಾಲಿಯಲ್ಲಿ ಇಂಗ್ಲೀಷ್ ಬ್ಯಾನರ್ಗಳನ್ನ ದ್ವಂಸ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ರು. ಇನ್ನು, ಮಾರ್ಚ್ 13 ರವೆರೆಗೆ ನಾರಾಯಣಗೌಡ ಬಣದ ಕರವೇ ಕಾರ್ಯಕರ್ತರು, ಡೆಡ್ ಲೈನ್ ಕೊಟ್ಟಿದ್ರು ಆದ್ರೆ ಯಾವುದೇ ಅಂಗಡಿ ಮಾಲಿಕರು ನಾಮಫಲಕವನ್ನು ಬದಲಾವಣೆ ಮಾಡಿಲ್ಲ ಹೀಗಾಗಿ ಕೈಯಲ್ಲಿ ದೊಣ್ಣೆ ಹಿಡಿದು ಇಂಗ್ಲೀಷ್ ಬೋರ್ಡ ಗಳನ್ನ ಕರವೇ ಕಾರ್ಯಕರ್ತರು ಧ್ವಂಸ ಮಾಡಿದ್ರು.
ಇನ್ನು, ಕೊಪ್ಪಳದಲ್ಲಿ ಅನ್ಯ ಭಾಷೆ ನಾಮಫಲಕ ತೆರವುಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದು, ಆಂಗ್ಲ ಹಾಗೂ ಅನ್ಯ ಭಾಷೆ ನಾಮಫಲಕಗಳನ್ನು ಹರಿಯುತ್ತಿರುವ ಕರವೇ ಸಂಘಟಕರು ನಾಮಫಲಕ ಬ್ಯಾನರ್ ಗಳನ್ನು ಹರಿದ ಹಿನ್ನೆಲೆಯಲ್ಲಿ ಪೊಲೀಸರು ವಾರ್ನ್ ಮಾಡಿದ್ದಾರೆ.
ಹಾಗೆನೇ ಕಲಬುರ್ಗಿ, ಬಾಗಲಕೋಟೆ, ಶೇ 60ರಷ್ಟು ಕನ್ನಡ ನಾಮಫಲಕ ಅಳವಡಿಸಲು ಗಡುವು ನೀಡಿದ ಸರ್ಕಾರ ಗಡುವು ಮುಗಿದ್ರು ಕನ್ನಡ ನಾಮಫಲಕ ಅಳವಡಿಸಲು ನಿರ್ಲಕ್ಷ ವಹಿಸಿದವರ ವಿರುದ್ಧ ಕರವೇ ಪ್ರತಿಭಟನೆ ಮಾಡಿದ್ದಾರೆ. ಅಂಗಡಿ ಮೇಲಿನ ಬೋಡ್೯ ಗಳು ಪುಡಿಯಾಗಿದೆ. ಅದೇ ರೀತಿಯಾಗಿ ರಸ್ತೆಯಲ್ಲೇ ಕುಳಿತು ಸಿಎಂ ಹಾಗೂ ಸರ್ಕಾರದ ವಿರುದ್ಧ ಕರವೇ ಕಾರ್ಯಕರ್ತರು ದಿಕ್ಕಾರ ಕೂಗುತ್ತಿದ್ದಾರೆ.