Top Newsಮನರಂಜನೆರಾಜ್ಯ

ಕಾಂತಾರ ನಟ ರಾಕೇಶ್ ಪೂಜಾರಿ ಇನ್ನಿಲ್ಲ

ಕಾಂತಾರ ಸಿನಿಮಾದ ಸಹ ನಟ, ಹಾಸ್ಯ ಕಲಾವಿದ ರಾಕೇಶ್​ ಪೂಜಾರಿ ಆಕಸ್ಮಿಕ ಸಾವು ಕಂಡಿದ್ದಾರೆ. 33 ವರ್ಷದ ರಾಕೇಶ್​ ಪೂಜಾರಿ ಹೃದಯಾಘಾತದಿಂದ ದಿಢೀರ್ ನಿಧನ ಹೊಂದಿದ್ದಾರೆ. ನಿನ್ನೆ ಬೆಳಗ್ಗೆ 11 ಗಂಟೆಗೆ ಕಾಂತಾರ ಸಿನಿಮಾ ಶೂಟಿಂಗ್​ ನಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿ ನಿನ್ನೆ ಸಂಜೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದಿದ್ದ ಗೆಳೆಯನ ಮದುವೆಯ ಮೆಹಂದಿ ಕಾರ್ಯಕ್ರಮ ಭಾಗಿ ಆಗಿದ್ರು. ಡ್ಯಾನ್ಸ್ ಮಾಡುವಾಗಲೇ ಕುಸಿದು ಇಹಲೋಕ ತ್ಯಜಿಸಿದ್ದಾರೆ. ಲೋ ಬಿಪಿಯಿಂದ ಕುಸಿದ 33 ವರ್ಷದ ನಟ ರಾಕೇಶ್​ ಪೂಜಾರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗಲಿಲ್ಲ.

ಕಾಮಿಡಿ ಕಲಾವಿದ ಗೋವಿಂದೇಗೌಡ ಪ್ರಕಾರ
ನನಗೆ ರಾಕೇಶ್ ಪೂಜಾರಿ ತುಂಬಾ ಆಪ್ತ.. ಒಳ್ಳೆಯ ಕಲಾವಿದ.. ಮೇಲಾಗಿ ಒಳ್ಳೆಯ ಮನುಷ್ಯ. ಎಲ್ಲರಿಗೂ ಇಷ್ಟವಾಗುತ್ತಿದ್ದ ವ್ಯಕ್ತಿತ್ವ ರಾಕೇಶ್ ಪೂಜಾರಿಯದ್ದು. ಸಾವಿನ ಸುದ್ದಿ ಕೇಳಿ ಬಹಳ ಬೇಜಾರಾಗಿದೆ. ರಾಕೇಶ್ ಪೂಜಾರಿಗೆ ಪ್ಲೇಟ್‌ಲೆಟ್ಸ್ ಕಡಿಮೆ ಆಗಿತ್ತಂತೆ. ಹೃದಯಾಘಾತ ಸಂಭವಿಸಿ ಹೀಗಾಗಿದೆ. ನಿನ್ನೆ ಕಾಂತಾರ ಶೂಟಿಂಗ್‌ನಲ್ಲಿ ಇದ್ದ ರಾಕೇಶ್ ಶೆಟ್ಟಿ, ಅದನ್ನ ಮುಗಿಸಿಕೊಂಡು ಸ್ನೇಹಿತರೊಬ್ಬರ ಫಂಕ್ಷನ್‌ಗೆ ಹೋಗಿದ್ದ. ಅಲ್ಲಿ ಸುಸ್ತು.. ಸುಸ್ತು.. ಅಂತ ಹೇಳ್ತಿದ್ದ.. ಅದಾದ್ಮೇಲೆ ಸಡನ್‌ ಆಗಿ ಹಾರ್ಟ್‌ ಅಟ್ಯಾಕ್ ಆಗಿದೆ. ನಮಗೆ ಶಾಕ್ ಆಗಿದೆ. ಸಹಿಸಿಕೊಳ್ಳಲು ಆಗುತ್ತಿಲ್ಲ.ರಾಕೇಶ್ ಪೂಜಾರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಇತ್ತೀಚೆಗಷ್ಟೇ ಒಂದು ಆಕ್ಸಿಡೆಂಟ್ ಆಗಿತ್ತು. ಕಣ್ವದಲ್ಲಿ ಅಡ್ಮಿಟ್‌ ಆಗಿದ್ದರು. ರೋಡ್‌ನಲ್ಲಿ ಸ್ಕಿಡ್ ಆಗಿ ಬಿದ್ದಿದ್ದ. ಬೇಗ ರಿಕವರಿ ಆದ. ತುಂಬಾ ಆಕ್ಟೀವ್ ಪರ್ಸನ್‌. ಸಡನ್‌ ಆಗಿ ಈಗ ಆಗಿದೆ

ಮನೆಗೆ ಆಧಾರ ಆಗಿದ್ದ ರಾಕೇಶ್ ಪೂಜಾರಿ
ಇತ್ತೀಚೆಗಷ್ಟೇ ಅವರ ತಂದೆ ಸಹ ತೀರಿಕೊಂಡಿದ್ದರು. ತಂದೆಗೂ ಹೃದಯಾಘಾತ ಆಗಿತ್ತು. ಮನೆಗೆ ಆಧಾರ ಆಗಿದ್ದು ರಾಕೇಶ್ ಪೂಜಾರಿ. ಮಗನ ಮೇಲೆ ತಾಯಿ ತುಂಬಾ ಆಸೆ ಇಟ್ಟುಕೊಂಡಿದ್ದರು. ಈಗ ಚೆನ್ನಾಗಿ ಬೆಳೆಯುತ್ತಿದ್ದ. ಕಾಂತಾರ ಸಿನಿಮಾದಲ್ಲಿ ಒಳ್ಳೆಯ ಕ್ಯಾರೆಕ್ಟರ್‌ ಸಿಕ್ಕಿತ್ತು. ಅಷ್ಟರಲ್ಲಿ ಹೀಗಾಗಿದೆ ಎಂದು ಕಲಾವಿದ ಗೋವಿಂದೇ ಗೌಡ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button