ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ ನಡೆದ ರಷ್ಯಾ ಚುನಾವಣೆಯಲ್ಲಿ ಸೋವಿಯತ್ ನಂತರ ಅಧಿಕಾರದ ಮೇಲೆ ತಮ್ಮ ಹಿಡಿತವನ್ನು ಭದ್ರಪಡಿಸಿಕೊಂಡಿದ್ದಾರೆ. ಪುಟಿನ್ ಸರ್ವಾಧಿಕಾರದ ವಿರುದ್ಧ ಮತದಾನದ ಕೇಂದ್ರಗಳಲ್ಲಿ ವಿರೋಧ ಹಾಗೂ ಪ್ರತಿಭಟನೆಯನ್ನ ನಡೆಸಿದ್ದಾರೆ. ಹೀಗಾಗಿ ನ್ಯಾಯಯುತ್ತವಾಗಿ ಮತದಾನ ನಡೆದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಇದರ ನಡುವೆಯೇ ಪುಟಿನ್ 87.8% ಮತಗಳನ್ನು ಗಳಿಸಿದ್ರು. ಇದು ರಷ್ಯಾದ ಸೋವಿಯತ್ ನಂತರದ ಇತಿಹಾಸದಲ್ಲಿ ಅತ್ಯಧಿಕ ಫಲಿತಾಂಶವಾಗಿದೆ ಅಂತ ಪೋಲ್ಸ್ಟರ್ ಪಬ್ಲಿಕ್ ಒಪಿನಿಯನ್ ಫೌಂಡೇಶನ್ ನಿರ್ಗಮನದ ಸಮೀಕ್ಷೆಯಾಗಿದೆ. ಮೊದಲ ಅಧಿಕೃತ ಫಲಿತಾಂಶಗಳು ಸಮೀಕ್ಷೆಗಳು ನಿಖರವಾಗಿದೆ ಎಂದು ಸೂಚಿಸಿದೆ.
ಶುಕ್ರವಾರದಂದು ಪ್ರಾರಂಭವಾದ ಮೂರು ದಿನಗಳ ಮತದಾನ ಬಿಗಿ ಭದ್ರತೆಯಿಂದ ಕೂಡಿತ್ತು. 11 ವಲಯಗಳ ಮತದಾನ ಕೇಂದ್ರದಲ್ಲಿ, ಉಕ್ರೇನ್ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರದೇಶ ಮತ್ತು ಆನ್ಲೈನ್ ಮೂಲಕ ಮತದಾನ ನಡೆಯಿತು. ಬಿಗಿ ಭದ್ರತೆಯಲ್ಲಿ ಮತದಾನ ನಡೆದರು. ಕೆಲವು ಕಡೆ ಹಿಂಸಾಚಾರಗಳು ಭುಗಿಲೆದ್ದಿವೆ. ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಮಹಿಳೆಯೊಬ್ಬರು ಫೈರ್ಬಾಂಬ್ ಎಸೆದಿದ್ದಾರೆ. ಈ ವೇಳೆ ಆಕೆಯನ್ನು ಬಂಧಿಸಲಾಗಿದೆ. ಇದಲ್ಲದೆ ಮತಪೆಟ್ಟಿಗೆಗಳಿಗೆ ಸ್ಯಾನಿಟೈಸರ್, ಶಾಯಿ ಕೂಡ ಎಸೆದವರನ್ನು ಅರೆಸ್ಟ್ ಮಾಡಲಾಗಿದೆ
ವಿರೋಧ, ಪ್ರತಿಭಟನೆ ನಡುವೆಯೂ ಇತಿಹಾಸ ಸೃಷ್ಟಿಸಿದ ಪುಟಿನ್!
RELATED ARTICLES