ಮುಂಬೈ: ಅದೇನು ಪವಾಡವೋ ಗೊತ್ತಿಲ್ಲ. ಬಾಲಿವುಡ್ ನಟ-ನಟಿಯರಿಗೆಲ್ಲ ಮಾತ್ರ ಈತ ಬೇಕೇ ಬೇಕು. ಅಷ್ಟೇ ಅಲ್ಲ, ಬಾಲಿವುಡ್‌ ಎಲ್ಲ ನಟಿಯರ ಜತೆ ಕ್ಲೋಸ್ ಆಗಿ ಅಂದರೆ ನಟಿಯರ ಎದೆ, ಸೊಂಟದ ಮೇಲೆ ಧೈರ್ಯವಾಗಿ ಕೈ ಇಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುವಷ್ಟು ಸಲುಗೆ ಇದೆ.

ನಟ-ನಟಿಯರು ಎಷ್ಟೇ ಸೆಲೆಬ್ರಿಟಿಯಾಗಿರಲಿ, ಎಷ್ಟೇ ಭದ್ರತೆ ಹೊಂದಿರಲಿ, ಬಾಡಿಗಾರ್ಡ್ಸ್ಗಳ ದಂಡೇ ಇರಲಿ, ಓರ್ರಿ ಅಕಾ ಒರ್ಹಾನ್ ಅವತ್ರಮಣಿಗೆ ಇವೆಲ್ಲ ಲೆಕ್ಕವೇ ಅಲ್ಲ. ಖುಲ್ಲಂಖುಲ್ಲ ಬಾಲಿವುಡ್ ನಟರ ಹೆಗಲ ಮೇಲೆ, ನಟಿಯರ ಎದೆ, ಸೊಂಟದ ಮೇಲೆ ಕೈಯಿಟ್ಟು ನಗೆ ಬೀರುತ್ತಾನೆ.

ನಟಿಯರಷ್ಟೇ ಅಲ್ಲ, ಅಂಬಾನಿ ಮನೆಯ ಹುಡುಗಿಯರೂ ಸೇರಿದಂತೆ ಎಲ್ಲರ ಎದೆ ಮೇಲೆ ಕೈ ಇಟ್ಟು ಓರೆ ನೋಟ ನೀಡುವ ಪೋಸ್‌ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಓದ್ರಿ ಯಾರು ಏನು ಎಂಬುದು ಅಷ್ಟಾಗಿ ಬಹಿರಂಗವಾಗದಿದ್ದರೂ ಎಲ್ಲ ನಟಿಯರಿಗೂ ಓರಿ ವೆರಿ ಕ್ಲೋಸ್ ಎಂಬುದಂತೂ ಸತ್ಯ. ಅಂದಹಾಗೆ, ಹೆಣ್ಣುಮಕ್ಕಳ ಮೈಮೇಲೆ ಕೈಯಿಟ್ಟು ಪೋಸ್ ಕೊಡುವ ಮೂಲಕವೇ ಈ ಓರ್ರಿ ದಿನವೊಂದಕ್ಕೆ ಲಕ್ಷ ಲಕ್ಷ ಸಂಪಾದಿಸುತ್ತಾರೆ.

ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿರುವ ಓರಿ ಸೆಲೆಬ್ರಿಟಿಗಳ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಲ್ಲದೆ ಓರ್ರಿಯ ಲಕ್ಸುರಿಯಸ್ ಲೈಫ್‌ಸ್ಟೈಲ್ ಎಲ್ಲರ ಗಮನ ಸೆಳೆಯುತ್ತದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓರ್ರಿ ಅವತ್ರಮಣಿ, ತಮ್ಮ ಆದಾಯದ ಪ್ರಾಥಮಿಕ ಮೂಲವನ್ನು ಬಹಿರಂಗಪಡಿಸಿದ್ದರು.

‘ಸದ್ಯಕ್ಕೆ, ನನ್ನ ಗಮನ ಸಂತೋಷದ ಸಂದೇಶವನ್ನು ಹರಡುವುದಾಗಿದೆ. ಇದೇ ನನ್ನ ಆದಾಯದ ಮೂಲವಾಗಿದೆ’ ಎಂದು ಓರ್ರಿ ಹೇಳಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಹಾಜರಾಗಲು 15ರಿಂದ 30 ಲಕ್ಷ ರೂಪಾಯಿ ಪಡೆಯುವುದಾಗಿ ಓ ಹೇಳಿಕೊಂಡಿದ್ದಾರೆ. ‘ಜನರು ನನ್ನನ್ನು ಮದುವೆಗೆ ಕರೆಯುತ್ತಾರೆ. ನನಗೆ 15 ರಿಂದ 30 ಲಕ್ಷ ರೂ. ಪಾವತಿಸುತ್ತಾರೆ’ ಎಂದು ತಿಳಿಸಿದ್ದಾರೆ.

ಈ ಹಿಂದೆ, ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ‘ಬಿಗ್ ಬಾಸ್ 17’ರಲ್ಲಿ ಕಾಣಿಸಿಕೊಂಡಾಗ, ಓ ಅವರು ಕೇವಲ ಚಿತ್ರಗಳಿಗೆ ಪೋಸ್ ನೀಡಲು ಸುಮಾರು 20 ರಿಂದ 30 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು. ಈವೆಂಟ್‌ಗಳಲ್ಲಿ ನಾನು ಕೊಡುವ ಪೋಸ್‌ನೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅವುಗಳನ್ನು ಪೋಸ್ಟ್ ಮಾಡಲು ನನಗೆ ಹಣ ಕೊಡುತ್ತಾರೆ. ಈ ಚಿತ್ರಗಳಿಗಾಗಿ ನಾನು ಒಂದೇ ರಾತ್ರಿಯಲ್ಲಿ ಸುಮಾರು 20-30 ಲಕ್ಷ ರೂಪಾಯಿ ಗಳಿಸುತ್ತೇನೆ ಎಂದು ಓರಿ ಹೇಳಿದ್ದರು.

By admin

Leave a Reply

Your email address will not be published. Required fields are marked *

Verified by MonsterInsights