ಬೆಂಗಳೂರು : ನಟಿ ಮೀರಾ ಜಾಸ್ಮಿನ್ ಸಖತ್ ಹಾಟ್ ಲುಕ್ನಲ್ಲಿ ಮಿಂಚುತ್ತಿರುವ ಮೀರಾ, ಕಮ್ಬ್ಯಾಕ್ಗಾಗಿಯೇ ಭರ್ಜರಿ ತಯಾರಿ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಮೀರಾ ಮುದುವೆಯ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಸುಮಾರು 1 ವರ್ಷಗಳಿಂದ ಪ್ರೇಕ್ಷಕರಿಂದ ದೂರವೇ ಉಳಿದಿದ್ದ ಈ ಚೆಲುವೆ ಈಗ ಲೇಟೆಸ್ಟ್ ಲುಕ್ಗಳ ಮೂಲಕ ಶೇಕ್ ಮಾಡ್ತಿದ್ದಾರೆ.
ನಟಿ ಬೋಲ್ಡ್ ಫೋಟೋಸ್ ವೈರಲ್ ಆಗಿದೆ. ಈ ಫೋಟೋ ನೋಡಿ ಫ್ಯಾನ್ಸ್ ಸೂಪರ್, ಎಷ್ಟು ಚಂದ… ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೀರಾ ಜಾಸ್ಮಿನ್, ಕನ್ನಡ, ತಮಿಳು ತೆಲುಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗಿನ ಸಾಲು ಸಾಲು ಚಿತ್ರಗಳ ಮೂಲಕ ಫೇಮಸ್ ಆಗಿದ್ರು. ಆರಂಭದಲ್ಲೇ ಹೋಮ್ಲಿ ಲುಕ್ನಲ್ಲೇ ಬೆಳ್ಳಿತೆರೆ ಮೇಲೆ ಮಿಂಚಿದ ಮೀರಾ ಜಾಸ್ಮಿನ್ 2ನೇ ಇನ್ನಿಂಗ್ಸ್ ಗೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.