ಒಡಿಶಾ : ಪತ್ನಿ ಮದ್ಯ ಸೇವಿಸಿ ನಿಂದಿಸಿದ ಕಾರಣಕ್ಕೆ ಪತಿ ಮರದ ಹಲಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮಂಗಳವಾರ ಭುವನೇಶ್ವರದ ಮೈತ್ರಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಣಿ ನಗರದ ಕೊಳೆಗೇರಿಯಲ್ಲಿ ನಡೆದಿದೆ.
ಪತಿ ಶವವನ್ನು ಕೋಣೆಯಲ್ಲಿ ಬಚ್ಚಿಟ್ಟು, ಎರಡು ದಿನಗಳ ಕಾಲ ಅದರೊಂದಿಗೆ ವಾಸಿಸುತ್ತಿದ್ದ, ಗುರುವಾರ ಮಗ ತಾಯಿಯ ಶವವನ್ನು ಪತ್ತೆ ಮಾಡಿದ್ದಾನೆ. ಗಂಜಾಂ ಮೂಲದ ವ್ಯಕ್ತಿ ತನ್ನ ಪತ್ನಿ ಮತ್ತು ಮೂವರು ಪುತ್ರರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಪತ್ನಿ ಮದ್ಯವ್ಯಸನಿಯಾಗಿದ್ದು, ಮಂಗಳವಾರ ಮಧ್ಯಾಹ್ನ ಕುಡಿದು ಬಂದು ಆತನನ್ನು ನಿಂದಿಸಲು ಆರಂಭಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಆಕೆಯನ್ನು ಮರದ ಹಲಗೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಕೋಣೆಯೊಂದರಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದನು. ವ್ಯಕ್ತಿಯನ್ನು ಬಂಧಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


