ರಾಜ್ಯಸುದ್ದಿ

ಕುಡಿದ ಮತ್ತಿನಲ್ಲಿ ಟಿಪ್ಪರ್​ ಚಾಲನೆ ; ಯುವಕ ಸಾವು !

ಯಾದಗಿರಿ : ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಟಿಪ್ಪರ್ ಚಾಲನೆ ಮಾಡಿರುವ ಪರಿಣಾಮ ರಸ್ತೆ ಪಕ್ಕ ನಿಂತಿದ್ದ ಯುವಕನಿಗೆ ಟಿಪ್ಪರ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ.

ನಸುಕಿನ ಜಾವ ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಟಿಪ್ಪರ್​ ಚಾಲನೆ ಮಾಡಿರುವ ಪರಿಣಾಮ ಈ ವೇಳೆ ರಸ್ತೆ ಪಕ್ಕದಲ್ಲಿ ಇದ್ದ ಮರ ಹಾಗೂ ಟ್ರಾಕ್ಟರ್​ಗೆ ಡಿಕ್ಕಿ ಹೊಡೆದು ಸಾಹಿಲ್ ಪಟೇಲ್ (18) ಎಂಬ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.

ರಸ್ತೆ ಅಪಘಾತ ಮಾಡಿ ಟಿಪ್ಪರ್ ಸಹಿತ ಎಸ್ಕೇಪ್ ಆಗುತ್ತಿದ್ದ ಟಿಪ್ಪರ್ ಚಾಲಕನನ್ನು ತಡೆಯಲು ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ನಂತರ ಟಿಪ್ಪರ್ ಸಹಿತ ಚಾಲಕ ಜೀವನ್​ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button