ವಿಜಯನಗರ : ರಾಶಿ ರಾಶಿ ಸೀರೆಗಳು ವಿಜಯನಗರದ ಲಾಡ್ಜ್ವೊಂದರಲ್ಲಿ ಪತ್ತೆಯಾಗಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಹೊಸಪೇಟೆಯ ಲಾಡ್ಜವೊಂದರಲ್ಲಿ ಸಾವಿರಾರ ಸೀರೆಗಳು ಪತ್ತೆಯಾಗಿದ್ದು ಯಾವುದೇ ಬಿಲ್ ಇಲ್ಲದ ಅನಧಿಕೃತ ಸೀರೆಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮತದಾರರಿಗೆ ಆಮಿಷದ ರೂಪದಲ್ಲಿ ಸೀರೆಗಳನ್ನ ಹಂಚಲು ತಂದಿರಬಹುದೆಂಬ ಅನುಮಾನ ಶುರುವಾಗಿದೆ. ಸ್ಥಳಕ್ಕೆ ಹೊಸಪೇಟೆಯ ಡಿ.ವೈ.ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇನ್ನು ಈ ಸೀರೆಗಳು ಯಾವ ಪಕ್ಷಕ್ಕೆ ಸೇರಿವೆ ಎಂಬುದು ಸಸ್ಯಕ್ಕೆ ತಿಳಿದು ಬಂದಿಲ್ಲ.
ಹೊಸಪೇಟೆಯ ಖಾಸಗಿ ಲಾಡ್ಜವೊಂದರ ಎರಡು ಕೊಠಡಿಗಳಲ್ಲಿ ಸೀರೆಗಳು ಪತ್ತೆಯಾಗಿವೆ. ಹೊಸಪೇಟೆ ಠಾಣಾ ಸಿಬ್ಬಂಧಿಯು ಆ ಎರಡು ಕೊಠಡಿಗಳನ್ನು ಲಾಕ್ ಮಾಡಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.