ಬಾಗಲಕೋಟೆ : ಲೋಕಸಭಾ ಚುನಾವಣೆ ಹಿನ್ನಲೆ ವೀಣಾ ಕಾಶಪ್ಪನವರಿಗೆ ಟಿಕೆಟ್ ಕೈ ತಪ್ಪುವ ಹಿನ್ನೆಲೆ, ನಗರದಲ್ಲಿ ಕೈ ಕಾರ್ಯಕರ್ತರ ಭಿನ್ನ ಮತ ಸ್ಪೋಟಗೊಂಡಿದೆ, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸುತ್ತಿರುವ ವೀಣಾ ಬೆಂಬಲಿಗರಿಗೆ ಕಚೇರಿ ಆವರಣಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆಹಿಡಿದಿದ್ದಾರೆ.
ವಿಜಯಪುರದ ಸಂಯುಕ್ತಾ ಪಾಟೀಲರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದ್ದು ,ಬೇರೆ ಜಿಲ್ಲೆಯವರಿಗೆ ಟಿಕೆಟ್ ನೀಡಬಾರದು ಎಂದು ಗೋ ಬ್ಯಾಕ್, ಸಂಯುಕ್ತಾ ಪಾಟೀಲ ಎನ್ನುವ ಬ್ಯಾನರ್ ಕೈಯಲ್ಲಿ ಹಿಡಿದ ಕಾರ್ಯಕರ್ತರು, ಬಾಯಿ ಬಡೆದುಕೊಂಡು ಕಾಶಪ್ಪನವರ ಬೆಂಬಲಿಗರು ದಿಕ್ಕಾರ ಕೂಗುತ್ತಿದ್ದರು. ಕಳೆದ ಕೆಲ ತಿಂಗಳಿಂದ ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಟಿಕೆಟ್ ಪಡೆಯಲು ಅಜಯಕುಮಾರ ಸರನಾಯಕ, ವೀಣಾ ಕಾಶಪ್ಪನವರ, ರಕ್ಷಿತಾ ಈಟಿ ಮತ್ತು ಸಂಯುಕ್ತ ಪಾಟೀಲ್, ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಅಚ್ಚರಿ ಎಂಬತೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಗೆ ಬಾಗಲಕೋಟೆ ಕಾಂಗ್ರೆಸ್ ಟಿಕೆಟ್ ಸಿಗುವ ಲಕ್ಷಣಗಳು ಹೆಚ್ಚಾಗಿದ್ದು, ಇದರಿಂದ ವೀಣಾ ಕಾಶಪ್ಪನವರ ಬೆಂಬಲಿಗರು ವೀಣಾ ಕಾಶಪ್ಪನವರಿಗೆ ಟಿಕೆಟ್ ಘೋಷಿಸಲೇಬೇಕೆಂದು ಆಗ್ರಹಿಸಿದ್ದಾರೆ.