ಉತ್ತರ ಪ್ರದೇಶ : ಗಂಡನಿಗೆ ಗೊತ್ತಿಲ್ಲದೇ ಲವರ್ನ ಮೆಂಟೇನ್ ಮಾಡಿದ್ದ ಹೆಂಡತಿ. ಅಕ್ರಮ ಸಂಬಂಧದಲ್ಲಿದ್ದ ಪ್ರಿಯಕರನನ್ನು ಮನೆಯಲ್ಲಿ ಇಟ್ಟುಕೊಳ್ಳೋಣ ಎಂದು ಹೈ-ಟೆನ್ಷನ್ ಕರೆಂಟ್ ಕಂಬವೇರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆಯು ಉತ್ತರ ಪ್ರದೇಶದ ಗೋರಖ್ಪುರದ ಪಿಪ್ರೈಚ್ ನಗರದಲ್ಲಿ ನಡೆದಿದೆ.
34 ವರ್ಷದ ಮೂರು ಮಕ್ಕಳ ತಾಯಿಯೊಬ್ಬರು ಕಳೆದ 7 ವರ್ಷಗಳಿಂದ ಪಕ್ಕದ ಊರಿನ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದು ಕೂಲಿ ಕೆಲಸ ಮಾಡುವ ಆಕೆಯ ಗಂಡ ರಾಮ್ ಗೋವಿಂದ್ಗೆ ಗೊತ್ತಿಲ್ಲದೇ ಇಷ್ಟು ದಿನ ಮೆಂಟೇನ್ ಮಾಡ್ಕೊಂಡು ಬಂದಿದ್ದಳು.
ಇದೀಗ ಅಕ್ರಮ ಸಂಬಂಧ ಪತಿಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಮನೆಯೆಲ್ಲ ನೀನೆ ನೋಡ್ಕೋ, ಪ್ರಿಯಕರನನ್ನು ಮನೆಗೆ ತಂದು ಇಟ್ಟುಕೊಳ್ಳುತ್ತೇನೆ ಎಂದು ಹಠ ಹಿಡಿದಿದ್ದಾಳೆ. ಇದಕ್ಕೆ ಗಂಡ ಒಪ್ಪಿಗೆ ಸೂಚಿಸದಿದ್ದಾಗ ಹೆಂಡತಿ ಹೈಟೆನ್ಸನ್ ಕರೆಂಟ್ ಕಂಬ ಏರಿ ವೈರ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಅಷ್ಟರಲ್ಲಿ ಸ್ಥಳೀಯರು ಆಕೆಯನ್ನು ನೋಡಿ ತಡೆ ಹಿಡಿದು ತಕ್ಷಣ ಪೊಲೀಸರಿಗೆ, ವಿದ್ಯುತ್ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ವಿದ್ಯುತ್ ಅನ್ನು ಬಂದ್ ಮಾಡಿದ್ದಾರೆ. ಇದರಿಂದ ಭಾರೀ ಅನಾಹುತವೊಂದನ್ನ ತಪ್ಪಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ಕೆಳಗಿಳಿಸಿ ಕುಟುಂಬಸ್ಥರ ಜೊತೆ ಮಾತನಾಡಿ ಮನೆಗೆ ಕಳುಹಿಸಿದ್ದಾರೆ.