Wednesday, April 30, 2025
30.3 C
Bengaluru
LIVE
ಮನೆಕ್ರೈಂ ಸ್ಟೋರಿ5 ಹೆಣ್ಣು ಮಕ್ಕಳು, 6ನೇ ಮಗುವಿನ ಲಿಂಗ ಪತ್ತೆಗೆ ಗರ್ಭಿಣಿ ಹೆಂಡ್ತಿಯ ಹೊಟ್ಟೆ ಸೀಳಿದ ವ್ಯಕ್ತಿಗೆ...

5 ಹೆಣ್ಣು ಮಕ್ಕಳು, 6ನೇ ಮಗುವಿನ ಲಿಂಗ ಪತ್ತೆಗೆ ಗರ್ಭಿಣಿ ಹೆಂಡ್ತಿಯ ಹೊಟ್ಟೆ ಸೀಳಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

ಉತ್ತರ ಪ್ರದೇಶ : ಉತ್ತರ ಪ್ರದೇಶದ ಬದೌನ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಹೆಂಡತಿ ಗಂಡು ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆಯೇ ಎಂದು ಪರೀಕ್ಷಿಸಲು ಕುಡಗೋಲು ಬಳಸಿ ಹೊಟ್ಟೆ ಸೀಳಿದ್ದಾನೆ. ಬದೌನ್‌ನ ಸಿವಿಲ್ ಲೈನ್ಸ್‌ನ ನಿವಾಸಿ ಪನ್ನಾ ಲಾಲ್ ಎಂಬಾತ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾಳ ಹೊಟ್ಟೆ ಸೀಳಿದ್ದ. ಈ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದಾರೆ. ಆದರೆ, ತನಗೆ ಗಂಡುಮಗು ಬೇಕು ಎಂದು ಪನ್ನಾ ಲಾಲ್ ಹೆಂಡತಿ ಜತೆ ಆಗಾಗ ಜಗಳವಾಡುತ್ತಿದ್ದ. ದಂಪತಿಗಳ ಜಗಳದ ಬಗ್ಗೆ ಅನಿತಾ ಅವರ ಕುಟುಂಬಕ್ಕೆ ತಿಳಿದಿತ್ತು. ಜಗಳವನ್ನು ನಿಲ್ಲಿಸಲು, ಪನ್ನಾ ಲಾಲ್ ಅವರನ್ನು ಮನವೊಲಿಸಲು ಅವರು ಪ್ರಯತ್ನಿಸಿದ್ದರು. ಆದರೆ ತಾನು ಅನಿತಾಗೆ ವಿಚ್ಛೇದನ ನೀಡುವುದಾಗಿ ಮತ್ತು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಪನ್ನಾಲಾಲ್ ಬೆದರಿಕೆ ಹಾಕಿದ್ದ.

ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಆಕೆ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾಳೆ. ಆದರೆ ಪನ್ನಾಲಾಲ್ ಅವಳನ್ನು ಹಿಡಿದು ಕುಡುಗೋಲಿನಿಂದ ಅವಳ ಹೊಟ್ಟೆಯನ್ನು ಸೀಳಿದ್ದಾನೆ. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಆತ ಹೊಟ್ಟೆ ಸೀಳಿದಾಗ ಕರುಳು ಹೊರಕ್ಕೆ ಬರುವಷ್ಟು ಆಳವಾದ ಗಾಯವಾಗಿತ್ತು ಎಂದು ಅನಿತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನೋವು ತಡೆಯಲಾರದೆ ಅನಿತಾ ಬೀದಿಗೆ ಓಡಿದ್ದರು. ಹತ್ತಿರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಳ ಸಹೋದರ ಅವಳ ಕೂಗು ಕೇಳಿ ಅವಳನ್ನು ರಕ್ಷಿಸಲು ಬಂದಿದ್ದಾನೆ. ಆತನನ್ನು ಕಂಡ ಕೂಡಲೇ ಪನ್ನಾ ಲಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಅನಿತಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆಕೆ ಈ ದಾಳಿಯಿಂದ ಬದುಕುಳಿದಿದ್ದರೂ, ಆಕೆಯ ಮಗುವನ್ನು ಉಳಿಸಲಾಗಲಿಲ್ಲ. ಹೊಟ್ಟೆಯಲ್ಲಿದ್ದ ಮಗು ಗಂಡು ಆಗಿತ್ತು. ಅನಿತಾ ತನ್ನ ಸಹೋದರರೊಂದಿಗೆ ಆಸ್ತಿ ವಿವಾದದಲ್ಲಿದ್ದ ಕಾರಣ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾ ಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments