ತುಮಕೂರು : ದಾಖಲೆ ಇಲ್ಲದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಹಣ ಹಾಗೂ ಚಿನ್ನ ತುಮಕೂರಿನಲ್ಲಿ ಪತ್ತೆಯಾಗಿದೆ. ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷದ 63 ಸಾವಿರದ 530 ರೂ ಹಾಗೂ 128 ಗ್ರಾಂ ಚಿನ್ನವನ್ನು ತುಮಕೂರಿನ ಬಟವಾಡಿ ಚೆಕ್ ಪೊಸ್ಟ್ ಬಳಿ ಪತ್ತೆ ಹಚ್ಚಲಾಗಿದೆ.
ಬೆಂಗಳೂರು ಕಡೆಯಿಂದ ತುಮಕೂರು ಮಾರ್ಗವಾಗಿ ಬರುತ್ತಿದ್ದ KA06F1296 ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪತ್ತೆಯಾಗಿದ್ದು, ಆಂದ್ರಪ್ರದೇಶದ ಅನಂತಪುರ ಮೂಲದ ವಾಡ್ಲಾ ನಾಗಭೂಷಣ ಎಂಬಾತನ ಬಳಿಯಿದ್ದ ಬ್ಯಾಗ್ ನಲ್ಲಿ ಪರಿಶೀಲಿಸಿದಾಗ ಹಣ ಹಾಗೂ ಚಿನ್ನಪತ್ತೆಯಾಗಿದೆ.
ಸದ್ಯ ಪತ್ತೆಯಾದ ಹಣ ಹಾಗೂ ಚಿನ್ನವನ್ನ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ಎನ್ ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..