ತೆಲಂಗಾಣ : ಪವನ್ ಕಲ್ಯಾಣ್ ಚುನಾವಣೆಗೆ ತಯಾರಾಗುತ್ತಿದ್ದಾರೆ. ಟಿಡಿಪಿ, ಬಿಜೆಪಿ ಜೊತೆ ಸೇರಿಕೊಂಡು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಆಂಧ್ರದ ಹಾಲಿ ಸರ್ಕಾರವನ್ನು ಉರುಳಿಸಿಯೇ ಸಿದ್ಧ ಎಂದು ಅಬ್ಬರಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು 21 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.
ಸ್ವತಃ ಪವನ್ ಕಲ್ಯಾಣ್ ಪೀತಾಪುರಂ ವಿಧಾನಸಭಾ ಕ್ಷೇತ್ರದಿಂದ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಪವನ್ ಕಲ್ಯಾಣ್ ಅತ್ತ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿಯೇ ಅವರ ಹೊಸ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಟೀಸರ್ ಬಿಡುಗಡೆ ಆಗಿದೆ
ಬ್ರಾಹ್ಮಣರ ಮೇಲೆ ಆಗುತ್ತಿರುವ ಹಲ್ಲೆಯನ್ನು ತಡೆದು ದೇವರ ಉತ್ಸವ ನಡೆಯಲು ಸಹಾಯ ಮಾಡುತ್ತಿರುವುದು, ದರ್ಗಾಕ್ಕೆ ಹೋಗಿ ಅಲ್ಲಿ ಮುಸ್ಲಿಮರನ್ನುದ್ದೇಶಿಸಿ ಭಾಷಣ (ಡೈಲಾಗ್) ಹೇಳುತ್ತಿರುವ ದೃಶ್ಯಗಳು ಈಗ ಬಿಡುಗಡೆ ಆಗಿರುವ ಟೀಸರ್ ನಲ್ಲಿದೆ. ಪವನ್ ಕಲ್ಯಾಣ್‌ರ ರಾಜಕೀಯ ಪಯಣಕ್ಕೆ ಬೂಸ್ಟ್ ನೀಡುವ ಕಾರಣಕ್ಕೆ ಕೆಲವು ದೃಶ್ಯಗಳನ್ನು ಸಿನಿಮಾದಲ್ಲಿ ಪೋಣಿಸಿರುವುದು ಟೀಸರ್‌ನಿಂದಲೇ ತಿಳಿದು ಬರುತ್ತಿದೆ. ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವ ಧೀರೋದಾತ್ತನಂತೆ ಪವನ್‌ರನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.