ನವದೆಹಲಿ : ಐಪಿಎಲ್ ಆರಂಭಕ್ಕೆ ಇನ್ನೇರಡು ದಿನ ಬಾಕಿ ಇರುವಾಗ ಡೆಲ್ಲಿ ಕ್ಯಾಪಿಟಲ್ಸ್ ತನ್ನ ನಾಯಕನನ್ನು ಬದಲಾಯಿಸಿದೆ.
ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನಾಯಕತ್ವದಿಂದ ಕೆಳಗಿಳಿದಿದ್ದು, ತಂಡದ ಮಾಜಿ ನಾಯಕ ರಿಷಬ್ ಪಂತ್ ಮತ್ತೊಮ್ಮೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ.
2023 ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಅಂದಿನಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಅಪಘಾತದಿಂದಾಗಿ ಪಂತ್ ಪ್ರಮುಖ ಐಸಿಸಿ ಈವೆಂಟ್ಗಳನ್ನು ಕಳೆದುಕೊಂಡಿದಲ್ಲದೆ ಐಪಿಎಲ್ನಿಂದಲೂ ಹೊರಬಿದ್ದಿದ್ದರು.
ಕ್ರಿಕೆಟ್ ಅಂಗಳಕ್ಕಿಳಿಯಲು ಸಜ್ಜಾಗಿರುವ ಪಂತ್, ಐಪಿಎಲ್ ಮೂಲಕ ವೃತ್ತಿಪರ ಕ್ರಿಕೆಟ್ ಕಾಲಿಡುತ್ತಿದ್ದಾರೆ. ಹೀಗಾಗಿ ಕಳೆದ ಆವೃತ್ತಿಯಲ್ಲಿ ಪಂತ್ ಅಲಭ್ಯತೆಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದ್ದ ಡೇವಿಡ್ ವಾರ್ನರ್, ತಂಡದ ಖಾಯಂ ನಾಯಕ ರಿಷಬ್ ಪಂತ್ತೆ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ.