ಐಪಿಎಲ್ ಇತಿಹಾಸದಲ್ಲಿ, ಒಂದು ಓವರ್‌ನಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟ ಅನೇಕ ಬೌಲರ್‌ಗಳು ಇದ್ದಾರೆ. ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಎನ್ರಿಕ್ ನಾರ್ಸಿಯಾ ಅವರ ಹೆಸರು ಭಾನುವಾರ ಈ ಪಟ್ಟಿಗೆ ಸೇರ್ಪಡೆಗೊಂಡಿದೆ.

ಮುಂಬೈ ಪರ ಆಡುತ್ತಿರುವ ವೆಸ್ಟ್ ಇಂಡೀಸ್‌ನ ಅಪಾಯಕಾರಿ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅವರು ನಾರ್ಕಿಯಾ ಅವರ ಒಂದು ಓವರ್‌ನಲ್ಲಿ 32 ರನ್ ಗಳಿಸಿದರು. ಇದು ಐಪಿಎಲ್ 2024ರ ಅತ್ಯಂತ ದುಬಾರಿ ಓವರ್ ಆಗಿದೆ. ಒಂದೇ ಪಂದ್ಯದಲ್ಲಿ ಅವರು ಬೇಡದ ಒಂದು ದಾಖಲೆ ನಿರ್ಮಿಸಿದ್ದಾರೆ.

ಮೊದಲಿಗೆ 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ RCB ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಒಂದು ಓವರ್‌ನಲ್ಲಿ ಮೂವತ್ತೇಳು ರನ್ ಗಳಿಸಿದ್ದರು. ಈ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಈ ಪಟ್ಟಿಯಲ್ಲಿ ಭಾರತದ ಬೌಲರ್ ಹೆಸರು ಎರಡನೇ ಸ್ಥಾನದಲ್ಲಿದೆ.



