ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದೆ. ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿಯಲ್ಲಿ ದುರಂತ ಸಂಭವಿಸಿದ್ದು, 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮುಳುಗಿ 94 ಮಂದಿ ಜಲ ಸಮಾಧಿಯಾಗಿದ್ದಾರೆ. ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದೂ, ಸಧ್ಯ ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ .
ಮೂಲಗಳ ಪ್ರಕಾರ ಮೀನುಗಾರಿಕಾ ದೋಣಿಯನ್ನು ಪ್ರಯಾಣಿಕಾ ದೋಣಿಯಾಗಿ ಮಾರ್ಪಡಿಸಲಾಗಿತ್ತು. ಆದರೆ ಈ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿರಲಿಲ್ಲ ಎಂದು ಹೇಳಲಾಗ್ತಾ ಇದೆ. ಮೊಜಾಂಬಿಕ್ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚುತ್ತಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಕಾಲರಾ ಪ್ರಕರಣಗಳು ವರದಿಯಾಗಿದ್ದೂ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಲರಾದ ಹಿನ್ನಲೆಯಲ್ಲಿ ಪ್ರಯಾಣಿಕರು ಏಕಕಾಲದಲ್ಲಿ ತಮ್ಮ ತವರಿಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗ್ತಾ ಇದೆ.
ವಾಸ್ಕೋ-ಡ-ಗಾಮಾ ಕಂಡುಹಿಡಿದಿದ್ದ ಈ ದ್ವೀಪದಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತಲೇ ಇರುತ್ತದೆ ಎನ್ನಲಾಗುತ್ತದೆ.
ಡಯಾನ ಹೆಚ್ ಆರ್