Wednesday, April 30, 2025
32 C
Bengaluru
LIVE
ಮನೆರಾಜ್ಯವಿಷ್ಣುಗಾಗಿ ಹಲವು ಸಿನಿಮಾ,ಅಣ್ಣಾವ್ರಿಗೆ ಮಾತ್ರ ಎರಡು ಸಿನಿಮಾವನ್ನು ನಿರ್ಮಿಸಿದ್ದೇಕೆ ದ್ವಾರಕೀಶ್ ?  

ವಿಷ್ಣುಗಾಗಿ ಹಲವು ಸಿನಿಮಾ,ಅಣ್ಣಾವ್ರಿಗೆ ಮಾತ್ರ ಎರಡು ಸಿನಿಮಾವನ್ನು ನಿರ್ಮಿಸಿದ್ದೇಕೆ ದ್ವಾರಕೀಶ್ ?  

ದ್ವಾರಕೀಶ್​ ಅವರು ನಿರ್ಮಾಪಕನಾಗಿ ಸ್ಯಾಂಡಲ್​ವುಡ್​ನಲ್ಲಿಉತ್ತುಂಗಕ್ಕೆ ಏರಿದವರು. ವಿಷ್ಣುವರ್ಧನ್​ ಜೊತೆ ಅವರು ಹಲವು ಸಿನಿಮಾ ಮಾಡಿ ಮಾಡಿ ಸಿನಿ ರಸಿಕರಿಂದ ಭೇಷ್ ಎನಿಸಿಕೊಂಡವರು.ಸಂದರ್ಶನವೊಂದರಲ್ಲಿ ‘ವಿಷ್ಣುವರ್ಧನ್ ಒಳ್ಳೆಯ ನಟ. ನಾನು ಒಳ್ಳೆಯ ನಿರ್ಮಾಪಕ. ಅವನಿಗೆ ಒಳ್ಳೆಯ ನಿರ್ಮಾಪಕ ಬೇಕಾಗಿತ್ತು. ನನಗೆ ಒಳ್ಳೆಯ ನಟ ಬೇಕಿತ್ತು. ಅದೇ ನಮ್ಮ ಒಡನಾಡಕ್ಕೆ ಕಾರಣವಾಯ್ತು’ ಎಂದು ದ್ವಾರಕೀಶ್​ ಹೇಳಿಕೊಂಡಿದ್ದರು.

ನಟ, ನಿರ್ಮಾಪಕ, ನಿರ್ದೇಶಕರಾಗಿದ್ದ  ದ್ವಾರಕೀಶ್​ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಹಾಗೂ ಗಣ್ಯರು  ಕಂಬನಿ ಮಿಡಿದಿದ್ದಾರೆ. ದ್ವಾರಕೀಶ್​ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳು ಅಪಾರ. ಬಹುತೇಕ ಎಲ್ಲ ಮಲ್ಟಿಸ್ಟಾರ್ಸ್​ಗಳ​ ಜೊತೆ  ಅವರು ಒಡನಾಟ ಹೊಂದಿದ್ದರು. ಕನ್ನ್ಡದ ಮೇರು ನಟ ಡಾ. ರಾಜ್​ಕುಮಾರ್​ ಜೊತೆಗೂ ಅನೇಕ ಸಿನಿಮಾಗಳಲ್ಲಿ ದ್ವಾರಕೀಶ್​ ನಟಿಸಿದ್ದರು. ಆದರೆ ದ್ವಾರಕೀಶ್​ ನಿರ್ಮಾಣದ ಕೇವಲ ಎರಡು ಸಿನಿಮಾಗಳಲ್ಲಿ ಮಾತ್ರ ರಾಜ್​ಕುಮಾರ್​ ನಟಿಸಿದ್ದರು. ನಂತರದಲ್ಲಿಅವರು ವಿಷ್ಣುವರ್ಧನ್​ ಜೊತೆಗೆ ಹೆಚ್ಚು ಸಿನಿಮಾಗಳನ್ನು ಮಾಡಲು ಆರಂಭಿಸಿದರು.

ಆ ಕಾಲಘಟ್ಟದಲ್ಲೆ ಡಾ. ರಾಜ್​ಕುಮಾರ್ ಅವರ ಕಾಲ್​ಶೀಟ್​ ಸಿಗೋದು ಅಷ್ಟು ಸುಲಭದ ಮಾತಲ್ಲ. 1960ರ ದಶಕದಲ್ಲಿ ಅವರು ಸಖತ್ ಬ್ಯುಸಿ ಇದ್ದಂತವರು. ದ್ವಾರಕೀಶ್​ ಅವರು ಕೂಡ ಆಗತಾನೇ ನಿರ್ಮಾಪಕನಾಗಿ ಪಾದಾರ್ಪಣೆ ಮಾಡಿದವರು. ದ್ವಾರಕೀಶ್ ಆಗಿನ್ನೂ 25-26ರ ಪ್ರಾಯದ ಯುವಕ. ರಾಜ್​ಕುಮಾರ್​ ಜೊತೆ ನಟಿಸಿ ಫೇಮಸ್​ ಆಗಿದ್ದರು ಕೂಡ , ನಿರ್ಮಾಪಕನಾಗಿ ಅವರ ಡೇಟ್ಸ್​ ಪಡೆಯುವುದು ಸುಲಭದ ವಿಷಯವಾಗಿರಲ್ಲಿಲ್ಲ. ಹಾಗೋ ಹೀಗೋ ಡೇಟ್ಸ್​ ಪಡೆದ ಪ್ರಚಂಡ ಕುಳ್ಳ ‘ಮೇಯರ್​ ಮುತ್ತಣ್ಣ’ ಸಿನಿಮಾ ಮಾಡಿ ಸಕ್ಸಸ್ ಆದ್ರು.

ಅದಾದ ಸ್ವಲ್ಪ ಸಮಯದಲ್ಲೆ ‘ಭಾಗ್ಯವಂತರು’ ಸಿನಿಮಾವನ್ನು ನಿರ್ಮಿಸಿ ಭರ್ಜರಿ ಯಶಸ್ಸನ್ನ ಕಂಡ್ರು . ಅದಾದ ಬಳಿಕ ಮತ್ತೆ ಡಾ. ರಾಜ್​ಕುಮಾರ್​ ಸಿನಿಮಾಗಳಿಗೆ ದ್ವಾರಕೀಶ್​ ಬಂಡವಾಳ ಹೂಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ, ಅದಾಗಲೇ ಪಾರ್ವತಮ್ಮ ರಾಜ್​ಕುಮಾರ್​ ಅವರು ತಮ್ಮದೇ ನಿರ್ಮಾಣ ಸಂಸ್ಥೆಯಾದ  ‘ವಜ್ರೇಶ್ವರಿ ಕಂಬೈನ್ಸ್’ ಅನ್ನು ಆರಂಭಿಸಿದರು.ಹಾಗೂ  ರಾಜ್​ಕುಮಾರ್​ ಅವರ ಎಲ್ಲ ಸಿನಿಮಾಗಳು ‘ವಜ್ರೇಶ್ವರಿ ಕಂಬೈನ್ಸ್​’ ಮೂಲಕವೇ ನಿರ್ಮಾಣವಾಗಲು ಆರಂಭವಾದವು. ಹಾಗಾಗಿ ದ್ವಾರಕೀಶ್​ ಅವರಿಗಾಗಲಿ ಅಥವಾ ಬೇರೆ ಯಾರೇ ನಿರ್ಮಾಪಕರಿಗಾಗಲಿ ಅಣ್ಣಾವ್ರ ಕಾಲ್​ಶೀಟ್​ ಸಿಗದಾಯಿತು.

ರಾಜ್ ಕುಮಾರ್ ಅವರ ನಂತರ ಛಾಪು ಮುಡಿಸಿದ ನಟ ಅಂದ್ರೆ ವಿಷ್ಣುವರ್ಧನ್. 1970ರ ದಶಕದಲ್ಲಿ ವಿಷ್ಣುವರ್ಧನ್​ ಅವರು ಸ್ಟಾರ್​ ನಟನಾದರು. ವಿಷ್ಣುವರ್ಧನ್​ ಮತ್ತು ದ್ವಾರಕೀಶ್​ ಅವರು ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ನಟಿಸಿ ಭರ್ಜರಿ ಜೋಡಿಗಳು ಮಾತ್ರವಲ್ಲದೆ, ಅವರಿಬ್ಬರು ಏಕವಚನದಲ್ಲಿ ಮಾತನಾಡಿಕೊಳ್ಳುವಷ್ಟು ಆಪ್ತಮಿತ್ರರಾದರು. ನಿರ್ಮಾಪಕನಾಗಿ ಸಕ್ರಿಯರಾಗಿದ್ದ ದ್ವಾರಕೀಶ್​ ಅವರಿಗೆ ಈ ರೀತಿಯ ಸ್ಟಾರ್​ ಕಲಾವಿದರ ಕಾಲ್​ಶೀಟ್​ ಅಗತ್ಯವಾಗಿ ಬೇಕಾಗಿತ್ತು. ಅತ್ತ ಡಾ. ರಾಜ್​ಕುಮಾರ್​ ಅವರ ಡೇಟ್ಸ್​ ಸಿಗದಿದ್ದಾಗ, ಇತ್ತ ದ್ವಾರಕೀಶ್​ ಅವರಿಗೆ ವಿಷ್ಣು ಅವರ ಕಾಲ್​ಶೀಟ್​ ಸುಲಭದಲ್ಲಿ ಸಿಗುವಂತಾಯಿತು. ಹಾಗಾಗಿ ಅವರು ವಿಷ್ಣುಗಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments