Wednesday, January 28, 2026
20.2 C
Bengaluru
Google search engine
LIVE
ಮನೆವೈರಲ್ ನ್ಯೂಸ್ಕನ್ಯಾಕುಮಾರಿಯಲ್ಲಿ ಕೇಸರಿ ಬಟ್ಟೆ ಧರಿಸಿ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ

ಕನ್ಯಾಕುಮಾರಿಯಲ್ಲಿ ಕೇಸರಿ ಬಟ್ಟೆ ಧರಿಸಿ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ

ಕನ್ಯಾಕುಮಾರಿ : ವಿವೇಕಾನಂದರು ಕುಳಿತಿದ್ದ ಜಾಗದಲ್ಲಿ ಯೋಗಿ ಭಂಗಿಯಲ್ಲಿ ಕೇಸರಿ ಬಟ್ಟೆ ಧರಿಸಿ ಧ್ಯಾನಕ್ಕೆ ಕುಳಿತ ಪ್ರಧಾನಿ ಮೋದಿ ಫೋಟೋ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡುತ್ತಿರುವ ಚಿತ್ರಗಳು ಬಿಡುಗಡೆಯಾಗಿವೆ. ಎರಡು ತಿಂಗಳ ಕಾಲ ನಡೆಸಿದ ಸುದೀರ್ಘ ಚುನಾವಣಾ ಪ್ರಚಾರವನ್ನು ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕನ್ಯಾಕುಮಾರಿಗೆ ತೆರಳಿದ್ದರು.

ಇಲ್ಲಿ ನಾವು ವಿವೇಕಾನಂದ ರಾಕ್ ನಲ್ಲಿ ಸುಮಾರು 45 ಗಂಟೆಗಳ ಕಾಲ ಧ್ಯಾನದಲ್ಲಿ ತೊಡಗುವ ಉದ್ದೇಶದಿಂದ ಕನ್ಯಾಕುಮಾರಿಗೆ ಆಗಮಿಸಿದ್ದ ಮೋದಿ ಕಿತ್ತಲೆ ಬಣ್ಣದ ಕಾವಿಯ ಉಡುಗೆ ತೊಟ್ಟು ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂದೆ ಧ್ಯಾನ ಮಾಡಿದ್ದು, ಜೂನ್ ಒಂದು ಅಂದರೆ ನಾಳೆ ಮಧ್ಯಾಹ್ನದವರೆಗೆ ಇದೇ ಸ್ಥಳದಲ್ಲಿ ಧ್ಯಾನ ಮುಂದುವರೆಸಲಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಸಂಜೆ 4:45 ರ ಸುಮಾರಿಗೆ ತಿರುವನಂತಪುರದಿಂದ ಕನ್ಯಾಕುಮಾರಿಗೆ ವಿಮಾನದ ಮೂಲಕ ಬಂದು ಕರಾವಳಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನಕ್ಕೆ ತೆರಳಿದರು.

ಅಲ್ಲಿ, ಪಾರ್ವತಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ದೇವಾಲಯದ ಅಧಿಕಾರಿಗಳು ಅವರಿಗೆ ದೇವರ ಚಿತ್ರವನ್ನು ನೀಡಿದರು. ನಂತರ ಪ್ರಧಾನಿ ಮೋದಿ ವಿವೇಕಾನಂದರ ಬಂಡೆಗೆ ದೋಣಿ ಪ್ರಯಾಣ ನಡೆಸಿದರು. ಸ್ವಾಮಿ ವಿವೇಕಾನಂದರ ಪ್ರತಿಮೆ ಮತ್ತು ಪರಮಹಂಸ ಮತ್ತು ಶಾರದಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮೋದಿ ಧ್ಯಾನ ಮಂಟಪದಲ್ಲಿ ಧ್ಯಾನಸಕ್ತರಾದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments