Tuesday, June 24, 2025
25.9 C
Bengaluru
Google search engine
LIVE
ಮನೆಕ್ರಿಕೆಟ್4500 ರೂ ಕೊಟ್ಟು ಹೋದ್ರೆ ಸೀಟೇ ನಾಪತ್ತೆ.. ಮ್ಯಾಚ್​ ಮುಗಿದ್ಮೇಲೆ ಸತ್ಯ ಗೊತ್ತಾಯ್ತು!

4500 ರೂ ಕೊಟ್ಟು ಹೋದ್ರೆ ಸೀಟೇ ನಾಪತ್ತೆ.. ಮ್ಯಾಚ್​ ಮುಗಿದ್ಮೇಲೆ ಸತ್ಯ ಗೊತ್ತಾಯ್ತು!

ಮೊನ್ನೆ ಏಪ್ರಿಲ್ 5ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದ್ರಾಬಾದ್ ಮ್ಯಾಚ್​​ನಲ್ಲಿ ಅಭಿಮಾನಿಯೊಬ್ಬ ಫುಲ್ ಫಜೀತಿಗೀಡಾದ ಘಟನೆ ನಡೆದಿದೆ. ಅದೇನಂದ್ರೆ ಜುನೈದ್ ಅಹ್ಮದ್ ಎಂಬ ಅಭಿಮಾನಿಯೊಬ್ಬ ಹೈದ್ರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರೋ ಸನ್​ರೈಸರ್ ಹೈದ್ರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮ್ಯಾಚ್​ಗೆ 4500ರೂ ಹಣ ಕೊಟ್ಟು ಟಿಕೆಟ್ ಖರೀದಿಸಿದ್ದ.. ಈ ಟಿಕೆಟ್​​​​​ನ ಸೀಟ್​ ಸಂಖ್ಯೆ ಜೆ-66 ಆಗಿತ್ತು… ಆದ್ರೆ ಮ್ಯಾಚ್​ ದಿನ ಸ್ಟೇಡಿಯಂಗೆ ಹೋದ ಜುನೈದ್​ ಅಹ್ಮದ್​ಗೆ ಶಾಕ್ ಎದುರಾಗಿತ್ತು… ಯಾಕಂದ್ರೆ ತಾನು ಕುಳಿತುಕೊಳ್ಳಬೇಕಿದ್ದ ಸೀಟ್ ಮಾಯ ಆಗೋಗಿತ್ತು… 4500 ರೂ ಕೊಟ್ಟಿದ್ರೂ ತನ್ನ ಟಿಕೆಟ್​​ ಸಂಖ್ಯೆ J-66 ಸೀಟು ಅಲ್ಲಿ ಇರಲಿಲ್ಲ..

J-65 ಹಾಗೂ J-67 ಮಧ್ಯೆ ಇರಬೇಕಾಗಿದ್ದ J-66 ಸೀಟು ಅಲ್ಲಿ ಇರಲಿಲ್ಲ.. ಬೇಸರದಿಂದಲೇ ಜುನೈದ್ ನಿಂತುಕೊಂಡೇ ಇಡೀ ಪಂದ್ಯವನ್ನ ವೀಕ್ಷಿಸುವಂತಾಯ್ತು.

ಮ್ಯಾಚ್ ಮುಗಿದ್ಮೇಲೆ ಗೊತ್ತಾಯ್ತು ಸೀಟು ರಹಸ್ಯ!

ಜುನೈದ್ ತನ್ನ J-66 ಸೀಟು ಸಿಗದ ಕಾರಣ ನಿಂತುಕೊಂಡೇ ಮ್ಯಾಚ್ ನೋಡಿದ್ದ.. ಆದ್ರೆ ಮ್ಯಾಚ್ ಮುಗಿದ್ಮೇಲೆ ಆತನಿಗೆ ತನ್ನ ಸೀಟ್​ ಎಲ್ಲಿತ್ತು ಅನ್ನೋದು ಗೊತ್ತಾಗಿದೆ… ಆಗಿದ್ದು ಏನಂದ್ರೆ J-65 ಹಾಗೂ J-67 ಮಧ್ಯೆ ಇರಬೇಕಾಗಿದ್ದ J-66 ಸೀಟು, ಸ್ಟೇಡಿಯಂ ಸಿಬ್ಬಂದಿಯ ಯಡವಟ್ಟಿನಿಂದಾಗಿ J-69 ಹಾಗೂ J-70 ಮಧ್ಯೆ ಸೇರಿಕೊಂಡಿತ್ತು… ಆ ಸೀಟ್​ ಮೇಲೆ ಬೇರೆ ಯಾರೋ ಕೂತು ಮ್ಯಾಚ್ ನೋಡಿ ಹೋಗಿದ್ದಾರೆ..

4500 ರೂ ಕೊಟ್ಟರೂ ಸೀಟ್​ ಹುಡುಕಲು ಆಗದ ಜುನೈದ್ ಕಾಲು ನೋಯಿಸ್ಕೊಂಡು ಮ್ಯಾಚ್ ನೋಡಿ ಮನೆಗೆ ಮರಳಿದ್ದಾರೆ.. ಸ್ಟೇಡಿಯಂನಲ್ಲಿನ ತಾನು ಸೀಟು ಸಿಗದೆ ಪಟ್ಟ ಫಜೀತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜುನೈದ್ ಹೇಳಿಕೊಂಡಿದ್ದಾರೆ.

– ಡಯಾನ ಹೆಚ್ ಆರ್, ಫ್ರೀಡಂ ಟಿವಿ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments