ಮೈಸೂರು : ನಗರದ ಕುಂಬಾರಕೊಪ್ಪಲು ಗ್ರಾಮದಲ್ಲಿ ಎಲೆಕ್ಟ್ರಿಕ್ ಬೈಕ್‌ನಿಂದ ಬಾರಿ ಅವಘಡ ಸಂಭವಿಸಿದೆ.
ಎಲೆಕ್ಟ್ರಿಕ್ ಬೈಕ್ ಚಾರ್ಜ್ ಹಾಕಿದ ವೇಳೆ, ಶಾರ್ಟ್ ಸರ್ಕ್ಯೂಟ್ನಿಂದಾಗಿ ಎಲೆಕ್ಟ್ರಿಕ್ ಬೈಕ್ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲೆ ನಿಂತಿದ್ದ ಮತ್ತೊಂದು ಬೈಕ್ ಹಾಗೂ ಕಾರು ಬೆಂಕಿಗೆ ಆಹುತಿಯಾಗಿದೆ.
ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಘಟನೆ ನಡೆದಿದ್ದು, ಕುಂಬಾರಕೊಪ್ಪಲಿನ ಗುಂಡಪ್ಪ ಎಂಬುವವರಿಗೆ ಸೇರಿದ ವಾಹನವಾಗಿದೆ. ಬೆಂಕಿಯಿಂದ ಮನೆಯೂ ಸಹ ಬೆಂಕಿಯಲ್ಲಿ ಭಸ್ಮವಾಗಿ ಹೋಗಿದೆ. ಈ ಘಟನೆಯಿಂದಾಗಿ ಏರಿಯಅದ ಜನರು ದಿಗ್ಬ್ರಾಂತರಾಗಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.