ಯುಗಾದಿ ಅಂದ್ರೆ ಎಲ್ರಿಗೂ ಗೊತ್ತರೋದು ಎಣ್ಣೆ ಅಭ್ಯಂಜನ, ಬೇವು ಬೆಲ್ಲ ಹಾಗೂ ಹೊಸತೊಡಕಿನ ಮಾಂಸಾಹಾರಿ ಆಚರಣೆ ಆದರೆ ನಾವು ಹೇಳೊದಕ್ಕೆ ಹೊರ್ಟಿರೋ ವಿಷ್ಯನೇ ಬೇರೆ. ಯುಗಾದಿ ದಿನ ಹಿಂದೂಗಳ ಪ್ರಕಾರ ಹೊಸ ಸಂವತ್ಸರ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸೋದು ವಾಡಿಕೆ. ಆದ್ರೆ ಇಲ್ಲೋಂದು ತೀರ ಅಪರೂಪದ ಕಥೆಯೊಂದಿದೆ.
ಯುಗಾದಿಯಂದು ತಿರುಮಲದ ಕಡಪ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮುಸ್ಲಿಮರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದು ಈ ದೇಗುಲದ ವಾಡಿಕೆಯಾಗಿದೆ. ಪ್ರತಿ ವರ್ಷ, ವೆಂಕಟೇಶ್ವರನನ್ನು ಪೂಜಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಪುರಾಣಗಳ ಪ್ರಕಾರ ವೆಂಕಟೇಶ್ವರ ಸ್ವಾಮಿಯು ಬೀಬಿ ನಾಂಚಾರಮ್ಮರನ್ನು ವಿವಾಹವಾದ ಕಾರಣ, ಇಲ್ಲಿನ ಮುಸ್ಲಿಮರು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಸಂಬಂಧಿ ಎಂದು ಪರಿಗಣಿಸುವ ಪ್ರತೀತಿ ಈ ಭಾಗದಲ್ಲಿದೆ. ಇಷ್ಟೇ ಅಲ್ಲದೆ, ವೆಂಕಟೇಶ್ವರನನ್ನು ಕೂಡ ಇಲ್ಲಿ ಪೂಜಿಸುತ್ತಾರೆ . ವೆಂಕಟೇಶ್ವರ ದೇವರು ತಮ್ಮ ಸೊಸೆಯನ್ನು ಮದುವೆಯಾದ ಕಾರಣ, ಮುಸ್ಲಿಮರು ಅವರನ್ನು ಸಂಬಂಧಿ ಎಂದು ಪರಿಗಣಿಸುತ್ತಾರೆ.
ಕಡಪ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಯುಗಾದಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ. ಮುಸ್ಲಿಂ ಮಹಿಳೆಯರು ಬೀಬಿ ನಾಂಚಾರಮ್ಮ ಅವರನ್ನು ಜನ್ಮದಾತೆ ಎಂದು ಪರಿಗಣಿಸಿ ಸೀರೆಯನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.
ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ, ಇಷ್ಟಾರ್ಥಗಳು ಖಂಡಿತವಾಗಿಯೂ ನೆರವೇರುತ್ತವೆ ಎಂಬುದು ಮುಸ್ಲಿಮರ ನಂಬಿಕೆಯಾಗಿದೆ. ಅದಕ್ಕಾಗಿಯೇ ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಮರು ದೇಗುಲಕ್ಕೆ ಬಂದು ವೆಂಕಟೇಶ್ವರನನ್ನು ಪೂಜಿಸುತ್ತಾರೆ.
ಡಯಾನ ಹೆಚ್ ಆರ್