ಮುಂಬೈ ದಾಳಿಯ ಕೋಲಾಹಲ ಸೃಷ್ಟಿಸಿದ ಮಾಸ್ಟರ್‌ಮೈಂಡ್, ಮೋಸ್ಟ್ ಕ್ರಿಮಿನಲ್ ಟೆರೆರಿಸ್ಟ್ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿಶಪ್ರಾಶಾನದಿಂದ ತೀವ್ರ ಅಸ್ವಸ್ಥಗೊಂಡಿರುವ ಹಫೀಝ್ ಸಯೀದ್‌ಗೆ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದಲ್ಲಿ ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅನ್ನೋ ಗಾಳಿಮಾತುಗಳು ಜೋರಾಗುತ್ತಿರುವ ಬೆನ್ನಲ್ಲೇ, ಇದೀಗ ಪಾಕಿಸ್ತಾನ ನಿಂತಲ್ಲೇ ನಡುಗಿ ಹೋಗಿದೆ.
ಪಾಕಿಸ್ತಾನದಲ್ಲಿ ಮತ್ತೆ ಅಪರಿಚಿತನ ಅಬ್ಬರ ಆರಂಭಗೊಂಡಿದೆ. ಭಾರತಕ್ಕೆ ಬೇಕಾದ ಡೆಡ್ಲಿಯಸ್ಟ್ ಉಗ್ರರು ಒಬ್ಬರ ಹಿಂದೆ ಒಬ್ಬರು ಅಪರಿಚಿತರ ದಾಳಿಗೆ ಬಲಿಯಾಗುತ್ತಿದ್ದಾರೆ. ಇದರ ಹಿಂದೆ ಭಾರತದ ಕೈವಾಡವಿದೆ ಅನ್ನೋ ವರದಿಗಳು ಇತ್ತೀಚೆಗೆ ಕೋಲಾಹಲ ಸೃಷ್ಟಿಸಿದೆ. ಈ ಚರ್ಚೆ, ವಾದ ವಿವಾದಗಳು ತೀವ್ರಗೊಳ್ಳುತ್ತಿದ್ದಂತೆ ಇದೀಗ , ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಸಂಸ್ಥಾಪಕ, ಜಾಗತಿಕ ಭಯೋತ್ಪಾದಕ ಹಣೆಪಟ್ಟಿ ಹೊತ್ತಿರುವ ಮೋಸ್ಟ್ ವಾಂಟೆಡ್ ಹಫೀಝ್ ಸಯೀದ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿಶಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿರುವ ಹಫೀಝ್ ಸಯೀದ್‌ಗೆ ಐಸಿಯುನಲ್ಲಿ ಭಧ್ರತೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತಕ್ಕೇ ಬೇಕಾದ ಮೋಸ್ಟ್ ವಾಂಟೆಡ್ ಪಾಕಿಸ್ತಾನ್ ಉಗ್ರರನ್ನು ಭಾರತ, ಸ್ಲೀಪರ್ ಸೆಲ್ಸ್ ಮೂಲಕ ಹತ್ಯೆ ಮಾಡುತ್ತಿದೆ ಅನ್ನೋ ಗಂಭೀರ ಆರೋಪವನ್ನು ಪಾಕಿಸ್ತಾನ ಮಾಡಿದೆ. ಇದರ ಬೆನ್ನಲ್ಲೇ ಬ್ರಿಟನ್ ಪತ್ರಿಕೆ ದಿ ಗಾರ್ಡಿಯನ್ ಇತ್ತೀಚೆಗೆ ಪ್ರಕಟಿಸಿದ ವರದಿ ಪಾಕಿಸ್ತಾನದ ನಡುಕ ಹೆಚ್ಚಿಸಿತ್ತು. ಪಾಕಿಸ್ತಾನದಲ್ಲಿ ಅಪರಿಚಿತರ ದಾಳಿಗೆ ಬಲಿಯಾದ ಉಗ್ರರು ಭಾರತದ ಟಾರ್ಗೆಟ್ ಆಗಿತ್ತು. ಈ ಹತ್ಯೆ ಹಿಂದೆ ಭಾರತದ ಎಜೆನ್ಸಿ ಕೈವಾಡವಿದೆ ಕೂಡ ಎಂದು ವರದಿ ನೀಡಿತ್ತು.
ಅಪರಿಚಿತರ ದಾಳಿ ಆತಂಕ ಹೆಚ್ಚಾಗುತ್ತಿದ್ದಂತೆ ಭಾರಿ ಭದ್ರತೆಯಲ್ಲಿದ್ದ ಉಗ್ರ ಹಫೀಜ್ ಸಯೀದ್‌ಗೆ ಭಾರತ ವಿಷಪ್ರಾಶಾನ ಮಾಡಲಾಗಿದೆ ಅನ್ನೋ ಗಾಳಿಸುದ್ದಿಗೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ.
ಡಯಾನ ಹೆಚ್ ಆರ್