ಕಳೆದ ಚುನಾವಣೆಗಳಿಗೆ ಹೋಲಿಸಿಕೋಡ್ರೆ ಈ ಬಾರಿಯ ಲೋಕಸಭಾ ಚುನಾವಣಾ ಕದನ ಬಹಳ ರೋಚಕ ಮತ್ತು ಆಸಕ್ತಿದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಾಣಸಿ  ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೇಶದ ಮೊದಲ ತೃತೀಯ ಲಿಂಗಿ ಹಿಮಾಂಗಿ ಸಖಿ ಅವರನ್ನು ಚುನಾವಣಾ ಕದನದಲ್ಲಿ ಕಣಕ್ಕಿಳಿಸಲಾಗಿದೆ. 5 ಭಾಷೆಗಳಲ್ಲಿ ಭಗವತ್ ಕಥಾವನ್ನು ಹೇಳುವ ಮಹಾಮಂಡಲೇಶ್ವರ ಹಿಮಾಂಗಿ ಅವರು ಏಪ್ರಿಲ್ 10 ರೊಳಗೆ ವಾರಾಣಸಿಗೆ ಬರಲಿದ್ದಾರೆ.

ಪ್ರಧಾನಿ ಮೋದಿಯವರ ಬೇಟಿ ಬಚಾವೋ-ಬೇಟಿ ಪಢಾವೋ ಘೋಷಣೆ ಚೆನ್ನಾಗಿದೆ, ಆದರೆ ಅವರು ಕಿನ್ನರ್ ಬಚಾವೋ-ಕಿನ್ನರ್ ಪಢಾವೋ ಬಗ್ಗೆ ಎಂದಿಗೂ ಮಾತನಾಡಲಿಲ್ಲ, ನಾನು ಅದರ ಮೇಲೆ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದರಾದ ನಂತರ ತೃತೀಯ ಲಿಂಗಿಗಳಿಗೆ ಅವರ ಹಕ್ಕು ಮತ್ತು ಗೌರವವನ್ನು ಒದಗಿಸುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ ಹಿಮಾಂಗಿ ಸಖಿ. ಯಾರನ್ನೂ ಅಥವಾ ಪ್ರಧಾನಿಯನ್ನು ಸೋಲಿಸುವುದು ನನ್ನ ವೈಯುಕ್ತಿಕ ಉದ್ದೇಶವಲ್ಲ,ತೃತೀಯಲಿಂಗಿಗಳಿಗೂ ಉದ್ಯೋಗ, ಲೋಕಸಭೆ, ವಿಧಾನಸಭೆ, ಶಾಲಾ-ಕಾಲೇಜುಗಳಲ್ಲಿ ಮೀಸಲಾತಿ ಸಿಗಬೇಕು. ಅವರ ಪ್ರತಿನಿಧಿಯೂ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಬೇಕು, ಎನ್ನುತ್ತಾರೆ ಹಿಮಾಂಗಿ.

ಡಯಾನ ಹೆಚ್ ಆರ್, ಫ್ರೀಡಂ ಟಿವಿ

 

 

Leave a Reply

Your email address will not be published. Required fields are marked *

Verified by MonsterInsights