ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ಮೂಲದ ಅರುಣ್ ಜೊತೆಗೆ ಇದೇ ಮೇ-1 ರಂದು ವಿವಾಹ ಆಗುತ್ತಿದ್ದಾರೆ. ಇದೀಗ ತಮ್ಮ ಮದುವೆಯ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಡಿಫರೆಂಟ್ ಹಾಗೂ ಕ್ರಿಯೇಟಿವ್ ರೀತಿಯ ಮದುವೆಯ ಆಮಂತ್ರಣ ಪತ್ರ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಾ ಇದೆ.
ಜೊತೆಗೆ ಮನ್ವಿತಾ ಹರೀಶ್ ಒಂದು ಸುಂದರ ಲೈನ್ ಅನ್ನು ಕೂಡ ಬರ್ಕೊಂಡಿದ್ದಾರೆ ” When two artistic souls unite, magic happens? ” ಇನ್ನೂ ಈ ಲೈನ್ ನೋಡಿದ್ಮೇಲೆ ಮಾನ್ವಿತಾ ಮದುವೆ ಆಗೋ ಹುಡುಗ ಕೂಡ ಕಲಾ ಜಗತ್ತಿನ ವ್ಯಕ್ತಿನೇ ಆಗಿದ್ದಾರೆ ಅಂತ ಗೊತ್ತಾಗಿರುತ್ತೆ. ಅರುಣ್ ಸಿನಿಮಾರಂಗಕ್ಕೆ ಹತ್ತಿರದವರೆ. ಅರುಣ್ ಮೈಸೂರು ಮೂಲದವರೇ ಆಗಿದ್ದು. ಇದೇ ತಿಂಗಳ ಕೊನೆಯಲ್ಲಿ ಮದುವೆ ಸಂಭ್ರಮ ಶುರುವಾಗಲಿದೆ. ಏಪ್ರಿಲ್ 30 ರಂದು ಅರಿಶಿನ ಶಾಸ್ತ್ರ ಹಾಗೂ ಮೇ-1 ರಂದು ಮದುವೆ ನೆರವೇರಲಿದೆ.
ಡಯಾನ ಹೆಚ್ ಆರ್