ಮಂಡ್ಯ : ಲೋಕಸಭಾ ಕ್ಷೇತ್ರದ ಮತದಾರರ ಭೇಟಿಗೆ ಅನುಕೂಲವಾಗಲು ಹಾಗೂ ಪಕ್ಷದ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಸ್ಟಾರ್ ಚಂದ್ರು ಅವರ ನೂತನ ಗೃಹಕಚೇರಿಯ ಉದ್ಘಾಟನಾ ಸಮಾರಂಭ ಜರುಗಿದೆ.
ಗಣಪತಿಹೋಮ, ಪೂಜೆಯೊಂದಿಗೆ ಕಚೇರಿ ಆರಂಭ ಕಾರ್ಯ ಸುಸೂತ್ರವಾಗಿ ನೆರವೇರಿದೆ. ಎಂಎಲ್ಸಿ ದಿನೇಶ್ ಗೂಳಿಗೌಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ ಗಂಗಾಧರ್ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಡ್ಯ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂಬ ಹಿನ್ನೆಲೆಯಲ್ಲಿ ಕಚೇರಿ ತೆರೆದಿರುವುದಾಗಿ ಅವರ ಕಚೇರಿ ಮೂಲಗಳು ತಿಳಿಸಿವೆ.