Thursday, January 29, 2026
20.3 C
Bengaluru
Google search engine
LIVE
ಮನೆರಾಜ್ಯಗಣೆಗಾರಿಕೆ ಲಾರಿ ಮಾಲಿಕರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ.

ಗಣೆಗಾರಿಕೆ ಲಾರಿ ಮಾಲಿಕರ ವಿರುದ್ಧ ಸಾರ್ವಜನಿಕರ ಪ್ರತಿಭಟನೆ.

ತುಮಕುರು : ಗಣಿಗಾರಿಕೆಯ ಟಿಪ್ಪರ್ ಲಾರಿಗಳ ಅಬ್ಬರ, ಧೂಳಿನಿಂದ ನಲುಗಿ ಹೋದ ಹತ್ತಾರು  ಹಳ್ಳಿಗಳ ಸಾರ್ವಜನಿಕರು  ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಕ್ರಾಸ್ ನ ಬಳಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಟಿಪ್ಪರ್ ಲಾರಿಗಳ ಓಡಾಟದ ಧೂಳಿನಿಂದ ಬೆಳೆ ನಾಶವಾಗುತ್ತಿದೆ, ಮನೆಯಲ್ಲಿ ಇರಲು ಆಗುತ್ತಿಲ್ಲ ನೀರು, ಊಟದ ಮೇಲೆಲ್ಲಾ ಧೂಳು ತುಂಬಿ ಅನಾರೋಗ್ಯ ತಾಂಡವಾಡುತ್ತಿದೆ, ಅಸ್ತಮಾದಂತ ಉಸಿರು ಹಿಡಿದುಕೊಳ್ಳುವಂಥ ರೋಗ ಬಾದೆ ಹೆಚ್ಚಾಗುತ್ತಿದೆ, ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ನೂರಾರು ಜನ, ಗ್ರಾಮಸ್ಥರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದ ಐದು ಕ್ರಷರ್ ಬಳಿಯ ಹತ್ತಾರು ಹಳ್ಳಿಗಳ ಗ್ರಾಮಸ್ಥರು  ಜಂಪೆನಹಳ್ಳಿ ಬಳಿ ಗಣಿಗಾರಿಕೆಗೆ ಬಳಸುವ ಟಿಪ್ಪರ್ ಲಾರಿಗಳನ್ನ ತಡೆದು ಎರಡು ಗಂಟೆಗೂ ಹೆಚ್ಚಿನ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು, ಕೊರಟಗೆರೆ ಎ ಎಸ್ ಐ ಧರ್ಮೇಗೌಡರು , ಹೆಡ್ ಕಾನ್ಸ್ಟೇಬಲ್ ರಾಜಣ್ಣ ಪ್ರತಿಭಟನೆ ನಿರತ ಸಾರ್ವಜನಿಕರನ್ನ ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು, ಗಣಿಗಾರಿಕೆ ನಡೆಸುವ ಕಂಪನಿಯ ಮೆನೇಜರ್ ಪ್ರತಿಭಟನಾ ನಿರತರಿಗೆ ಪ್ರತಿದಿನ ಮೂರು ನಾಲ್ಕು ಬಾರಿ ರಸ್ತೆಗೆ ನೀರು ಹಾಕುವ ಮೂಲಕ ಟಿಪ್ಪರ್ ಲಾರಿಗಳ  ಧೂಳು ಆಗದಂತೆ ನಿಗಾ ವಹಿಸಲಾಗುವುದು ಎಂದು ಮನವಿ ಮಾಡಿಕೊಂಡ ಬಳಿಕ  ಸಾರ್ವಜನಿಕರು ಪ್ರತಿಭಟನೆ ಹಿಂಪಡೆದರು.

ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ ಪರಿಣಾಮ ನಾವು ಟ್ಯಾಂಕರ್​ನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೀರು ರಸ್ತೆಗೆ ಹೊಡೆಯಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಧೂಳು ಹೆಚ್ಚಾದ ಪರಿಣಾಮ ಪ್ರತಿಭಟನೆ ನಡೆಸಿದ್ದಾರೆ ಮುಂದಿನ ದಿನಗಳಲ್ಲಿ ಪ್ರತಿದಿನ ನಾಲ್ಕೈದು ಬಾರಿ ನೀರು ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಕ್ರಷರ್​ನ ಮಾಲಿಕರು ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡರು.

ಕ್ರಷರ್ ಲಾರಿಗಳು ಈ ಭಾಗದಲ್ಲಿ ಹೋರಾಡುವುದರಿಂದ ತುಂಬಾ ತೊಂದರೆಯಾಗಿದೆ, ಎಂ ಸ್ಯಾಂಡ್, ಜಲ್ಲಿ ತುಂಬಿದ ಟಿಪ್ಪರ್ ಲಾರಿಗಳಿಗೆ ಟಾರ್ಪಲ್ ಕಟ್ಟಿಕೊಂಡು ಹೋಗದ ಪರಿಣಾಮ ಎಂ ಸ್ಯಾಂಡ್, ಜಲ್ಲಿಗಳು ಜನರ ಮೇಲೆ ಬೀಳುತ್ತೇವೆ ಇದರಿಂದ ತುಂಬಾ ಅನಾನುಕೂಲವಾಗುತ್ತದೆ ಎಂದು ಹೇಲಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments