Friday, August 22, 2025
24.2 C
Bengaluru
Google search engine
LIVE
ಮನೆಕ್ರೈಂ ಸ್ಟೋರಿವಿದೇಶಕ್ಕೆ ತೆರಳಲು ಕಿಡ್ನ್ಯಾಪ್​ ಡ್ರಾಮಾ!​

ವಿದೇಶಕ್ಕೆ ತೆರಳಲು ಕಿಡ್ನ್ಯಾಪ್​ ಡ್ರಾಮಾ!​

ಮಧ್ಯಪ್ರದೇಶ : ಕಿಡ್ನ್ಯಾಪ್ ಆಗಿದ್ದೇನೆ ಎಂದು ಮಗಳೊಬ್ಬಳು ತಂದೆಗೆ ಸುಳ್ಳು ಹೇಳಿ 30 ಲಕ್ಷ ರೂ. ದೋಚಲು ಪ್ರಯತ್ನಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೋಟಾಗೆ ಅಧ್ಯಯನಕ್ಕೆಂದು ಹೋಗಿದ್ದ ವಿದ್ಯಾರ್ಥಿನಿ ಅಲ್ಲಿಂದ ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಳು. ಹಾಗಾಗಿ ತಾನು ಅಪಹರಣವಾಗಿದ್ದೇನೆಂದು ತಂದೆಗೆ ಸುಳ್ಳು ಫೋಟೊ ಕಳಿಸಿ 30 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಳು.

ಆಕೆಯನ್ನು ಕಾವ್ಯಾ ಎಂದು ಗುರುತಿಸಲಾಗಿದ್ದು, ಕೋಟಾದ ಹಾಸ್ಟೆಲ್‌ಗೆ ಕೋಚಿಂಗ್ ಗೆ ಸೇರಲು ತನ್ನ ತಾಯಿಯೊಂದಿಗೆ ಬಂದಿದ್ದಳು. ಕಾವ್ಯಾ ಹಾಸ್ಟೆಲ್‌ನಲ್ಲಿ ಕೇವಲ ಮೂರು ದಿನಗಳನ್ನು ಕಳೆದಿದ್ದಷ್ಟೆ ನಂತರ ತನ್ನ ಸ್ನೇಹಿತರೊಬ್ಬರೊಂದಿಗೆ ಇಂದೋರ್‌ಗೆ ಹೋಗಿದ್ದಳು ಅವರು ಕೂಡ ವಿದೇಶಕ್ಕೆ ಪ್ರಯಾಣಿಸಲು ಬಯಸಿದ್ದರು. ಆದರೆ ವಿದೇಶಕ್ಕೆ ಹೋಗಲು ಹಣದ ಸಮಸ್ಯೆಯಾಗಿ ಕಾವ್ಯ ಹಾಗೂ ಆಕೆಯ ಸ್ನೇಹಿತರು ಕಿಡ್ನಾಪ್ ನಾಟಕವಾಡಿದ್ದಾರೆ.
ತಮ್ಮ ಮಗಳ ಕೈ ಮತ್ತು ಕಾಲುಗಳನ್ನು ಕಟ್ಟಿರುವ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಮಾರ್ಚ್ 18 ರಂದು, ಕಾವ್ಯಾ ತಂದೆ ರಘುವೀರ್ ಧಾಕಡ್ ಅವರು ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಕೋಟಾ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿ ಹೊರಟ ಪೊಲೀಸರು ತನಿಖೆ ನಡೆಸಿ ಇಂದೋರ್ ನಲ್ಲಿ ಆಕೆಯನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಕಾವ್ಯಳ ಸ್ನೇಹಿತರಿಬ್ಬರು ಬಾಯಿ ಬಿಟ್ಟಿದ್ದು, ಕಾವ್ಯ ಮತ್ತು ಆಕೆಯ ಸ್ನೇಹಿತರು ವಿದೇಶಕ್ಕೆ ಹೋಗಲು ಬಯಸಿದ್ದರು ಆದರೆ ಸಾಕಷ್ಟು ಹಣವಿರಲಿಲ್ಲ ಹಾಗಾಗಿ ಈ ಅಪಹರಣ ನಾಟಕವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments