ಕೊಪ್ಪಳ : ಸ್ವಪಕ್ಷದ ನಾಯಕರ ವಿರುದ್ಧ ಬಂಡಾಯ ಎದ್ದಿದ್ದ ಇಕ್ಬಾಲ್ ಅನ್ಸಾರಿ ಮುನಿಸು ಕಾಂಗ್ರೆಸ್ಗೆ ಭೀತಿ ಹುಟ್ಟಿಸಿದ್ದು ಸುಳ್ಳಲ್ಲ. ಲೋಕಸಭಾ ಚುನಾವಣೆಯಲ್ಲಿ ನಾನೇನು ಅನ್ನೋದನ್ನ ತೋರಿಸಲಿದ್ದೇನೆ ಎಂದು ಇಕ್ಬಾಲ್ ಅನ್ಸಾರಿ ಆಕ್ರೋಶ ಭರಿತರಾಗಿ ಹೇಳಿದ್ದರು . ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಕರೆಯಲಾಗುವ ಯಾವುದೇ ಸಭೆಗಳಿಗೆ ಹೋಗಬೇಡಿ, ಯಾರು ಕರೆದರೂ ಹೋಗಬೇಡಿ ಎಂದು ಇಕ್ಬಾಲ್ ಅನ್ಸಾರಿ ತನ್ನ ಬೆಂಬಲಿಗರಿಗೆ ಪದೇ ಪದೇ ಸೂಚನೆ ನೀಡುತ್ತಿದ್ದರು.
ಕೇಂದ್ರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಮರದಲ್ಲಿ ಗೆಲ್ಲಲು ನಾನಾ ಕಸರತ್ತು ಮಾಡುತ್ತಿದೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡ್ತಿದೆ. ಈಗಾಗಲೇ ಟಿಕೆಟ್ ಸಿಗದೇ ಹತಾಶರಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಈಗ ಮತ್ತೊಂದೆಡೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿರುವುದು ಕಾಂಗ್ರೆಸ್ ನಾಯಕರ ನಿದ್ದೆ ಕೆಡಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಕಾಂಗ್ರೆಸ್ನಲ್ಲಿ ಬಂಡಾಯದ ಬೇಗುದಿ ಎದ್ದಿದೆ. ಕಾಂಗ್ರೆಸ್ ನಾಯಕರ ಮೇಲಿರುವ ಮುನಿಸು ಮರೆಯದೆ ಅನ್ಸಾರಿ ಕೊತ ಕೊತ ಸ್ಥಿತಿಯಲ್ಲಿದ್ದರು. ಶಿವರಾಜ್ ತಂಗಡಗಿ ಕೂಡ ನಾನಾ ರೀತಿ ಮನವೊಲಿಸಲು ಪ್ರಯತ್ನ ಪಟ್ಟರಾದ್ರು ಪರಿಶ್ರಮದಿಂದ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಖುದ್ದು ಸಿಎಂ ಸಿದ್ದರಾಮಯ್ಯನವರೇ ಎರಡು ದಿನದ ಹಿಂದೆ ಇಕ್ಬಾಲ್ ಅನ್ಸಾರಿಯವರನ್ನ ಭೇಟಿ ಮಾಡಿದ್ರು.
ಆದ್ರೆ ನಿನ್ನೆ ಸಚಿವ ಶಿವರಾಜ್ ತಂಗಡಗಿ ಇಕ್ಬಾಲ್ ಅನ್ಸಾರಿ ಯನ್ನ ಸಿಎಂ ನಿವಾಸಕ್ಕೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ. ಆ ವೇಳೆ ಕರೆದು ಕೊಂಡು ಸಿಎಂ ಬಳಿ ಭೇಟಿ ಮಾಡಿಸಿರೋ ಸಚಿವ ಶಿವರಾಜ್ ತಂಗಡಗಿ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋದಾಗಿ ಸಿಎಂ ಸಿದ್ದುಗೆ ಅನ್ಸಾರಿ ಭರವಸೆ ನೀಡಿದ್ದಾರೆ.