ಕೊಪ್ಪಳ : ಕೀರ್ತಿ ನಗರ, ಧನ್ವಂತರಿ ಕಾಲೋನಿಯಲ್ಲಿ ಕಳೆದ ರಾತ್ರಿ ಮೂರು ಮನೆಗಳಲ್ಲಿ ಸರಣಿ ಮನೆಗಳ್ಳತನ ನಡೆದಿದ್ದು, ಕೀರ್ತಿ ನಗರದ ನಿವಾಸಿ ಆದಿರಾಜ್ ಬಾವಿಕಟ್ಟಿ ನಿವಾಸದಲ್ಲಿ 1.20 ಲಕ್ಷ ನಗದು, ನೂರು ಗ್ರಾಮ್ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ.
ಮಕ್ಕಳ ಸ್ಕೂಲ್ ಪೀಸ್ಗಾಗಿ ಸಂಗ್ರಹಿಸಿಟ್ಟಿದ್ದ ಹಣ, ಸಂಬಂಧಿಗಳ ಮದುವೆಗೆ ಸಂಗ್ರಹಿದ್ದ ಹಣ, ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಲು ಸಂಗ್ರಹಿಸಿದ್ದ ಹಣ, ಕಳೆದ ಐದಾರು ವರ್ಷಗಳಿಂದ ಕಷ್ಟಪಟ್ಟು ದುಡದಿದ್ದ ಹಣ, ಕಳ್ಳರ ಪಾಲಾಗಿದೆ. ಝೆರಾಕ್ಸ್ ಸೆಂಟರ್ ನಡೆಸೋ ಆದಿರಾಜ್ ಬಾವಿಕಟ್ಟಿ ಅವರ ಕುಟುಂಬ ರಾತ್ರಿ ಹಾಲ್ ನಲ್ಲಿ ಮಲಗಿದ್ದರು.
ಹಿಂಬಾಗಿಲನ್ನು ಮುರಿದು ಒಳ ಬಂದು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಧನ್ವಂತರಿ ಕಾಲೋನಿಯಲ್ಲಿ ಜಯಮ್ಮ ಅನ್ನೋರ ಮನೆಯಲ್ಲಿ ಕೂಡಾ ಕಳ್ಳತನ ಆಗಿರುವಂತಹ ಘಟನೆ ಕಂಡುಬಂದಿದೆ. ಬೇಸಿಗೆ ಹಿನ್ನೆಲೆಯಲ್ಲಿ, ಮನೆ ಟೆರಸ್ ಮೇಲೆ ಮನೆಯವರು ಮಲಗಿದ್ದಂತಹ ಸಂದರ್ಭದಲ್ಲಿ ಹತ್ತು ಗ್ರಾಂ ಬಂಗಾರ ಸೇರಿದಂತೆ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.