ಕಲಬುರಗಿ : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.
ಯಾದಗಿರಿಯಿಂದ ಕಲಬುರಗಿಗೆ ಬರುತ್ತಿದ್ದ KA 32 F 2369 ಸಂಖ್ಯೆಯ ಎನ್‌ಈಕೆಆರ್‌ಟಿಸಿ ಬಸ್ ಚೆಕ್‌ಪೋಸ್ಟ್‌ನಲ್ಲಿ ಬಸ್ ತಪಾಸಣೆ ನಡೆಸಿದಾಗ ಚಿನ್ನ ಮತ್ತು ಬೆಳ್ಳಿಯನ್ನು ಪತ್ತೆ ಮಾಡಲಾಗಿದೆ.
ಶಹಾಪುರ ಮೂಲದ ಹಸನಪ್ಪ ಬೈಲಪತ್ತಾರ್ ಎಂಬುವರು ಬಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಒಯ್ಯುತ್ತಿದ್ದರು. ಸೂಕ್ತ ದಾಖಲೆಯಿಲ್ಲದ ಕಾರಣ 114.71 ಗ್ರಾಂ ಚಿನ್ನ, 3.289 ಕೆಜಿ ಬೆಳ್ಳಿ ಒಟ್ಟು 6 ಲಕ್ಷ 37 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನ ಚುನಾವಣೆ ಸಿಬ್ಬಂದಿಗಳು ಜಪ್ತಿ ಮಾಡಿದ್ದಾರೆ.