ಕೇರಳ : ನಟಿ ಪ್ರಿಯಾಮಣಿ ಅವರು ಎರ್ನಾಕುಲಂ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ರೋಬೋ ಎಲಿಫೆಂಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಟಿ ಪ್ರಿಯಾಮಣಿ ಅವರು ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ರೋಬೋ ಎಲಿಫೆಂಟ್ ಅನ್ನು ನೀಡಿದ್ದಾರೆ. ಗಾತ್ರ ಹಾಗೂ ಎತ್ತರದಲ್ಲಿ ಮೆಕ್ಯಾನಿಕಲ್ ಎಲಿಫೆಂಟ್, ನಿಜವಾದ ಆನೆಯನ್ನ ಮೀರಿಸುವಂತಿದ್ದು, ಈ ಆನೆ ಕಂಡು ಗ್ರಾಮಸ್ಥರು ಬೆರಗಾಗಿದ್ದಾರೆ.
ಪ್ರಾಣಿ ಪ್ರೇಮಿಗಳ ಸಂಘಟನೆಯಾದ ಪೇಟಾ ಮತ್ತು ಪ್ರಿಯಾಮಣಿ ಜಂಟಿಯಾಗಿ ಈ ಕೆಲಸ ಮಾಡಿದೆ. ಮಹಾದೇವ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಕೊಡುಗೆಯಾಗಿ ನೀಡಿದ್ದಾರೆ. ಪ್ರಿಯಾಮಣಿ ಕೆಲಸವನ್ನು ಅನೇಕರು ಕೊಂಡಾಡಿದ್ದಾರೆ. ಮಹದೇವನ್ ಎಂಬ ಹೆಸರಿನ ಆನೆಯನ್ನು ದೇವಾಲಯದ ಸಮಾರಂಭಗಳನ್ನು ಕ್ರೌರ್ಯ ಮುಕ್ತವಾಗಿ, ಸುರಕ್ಷಿತ ರೀತಿಯಲ್ಲಿ ಬಳಸಲಾಗುವುದು ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ , ತಮಿಳು, ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಗಿರುವ ನಟಿ ಪ್ರಿಯಾಮಣಿ ಇದೀಗ ದೇವಸ್ಥಾನಕ್ಕೆ ಮೆಕ್ಯಾನಿಕಲ್ ಎಲಿಫೆಂಟ್ ಉಡುಗೊರೆಯಾಗಿ ನೀಡಿದ್ದಾರೆ